ಚಿತ್ರದುರ್ಗ: ಯಾರಾದ್ರೂ ರಾತ್ರಿ ಕನ್ನಡಕ ಹಾಕಿಕೊಂಡು ರೌಂಡ್ಸ್ ಮಾಡ್ತಾರಾ? ಎಂದು ಡಿಕೆಶಿ ಕನ್ನಡಕ ಧರಿಸಿ ಬೆಂಗಳೂರಲ್ಲಿ ನೈಟ್ ರೌಂಡ್ಸ್ ಎಂದು ಆರ್ ಅಶೋಕ್ ಆರೋಪ ವಿಚಾರವಾಗಿ ಟಾಂಗ್ ಕೊಟ್ಟಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರಾದ್ರೂ ರಾತ್ರಿ ಕನ್ನಡಕ ಹಾಕಿಕೊಂಡು ರೌಂಡ್ಸ್ ಮಾಡ್ತಾರಾ? ನಾನು ಬೆಳಗ್ಗೆ ಓದುವಾಗ ಕನ್ನಡಕ ಹಾಕಿಕೊಳ್ಳುತ್ತೇನೆ.
ಅಶೋಕ್ ಯಾಕೆ ರಾತ್ರಿ ಕನ್ನಡಕ ಹಾಕಿಕೊಳ್ತಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೂ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂದು ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಯೋಗೇಶ್ವರ್ ನನ್ನ ಸಂಪರ್ಕದಲ್ಲಿ ಇಲ್ಲ. ಕುಮಾರಸ್ವಾಮಿಗೆ ಏನೇನೋ ಮಾಹಿತಿ ಇರಬಹುದು. ದಳದವರು, ಬೇರೆ ಪಕ್ಷದವರು ಸಂಪರ್ಕದಲ್ಲಿ ಇರಬಹುದು ಎಂದು ತಿರುಗೇಟು ನೀಡಿದ್ದಾರೆ.



