ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ತಲೆಕೂದಲು ಉದುರುವ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಹೆಲ್ಮೆಟ್ ಧರಿಸುವವರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತಲೆಯ ಸುರಕ್ಷತೆಗೆ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.
Advertisement
ಅದು ಮುಖ್ಯ ಕೂಡ ಹೌದು. ಆದರೆ ಅದರಿಂದಾಗುವ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಹೆಲ್ಮೆಟ್ ಧರಿಸಿ ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಏನು ಪರಿಹಾರ ಮಾಡಬಹುದು ಎನ್ನುವ ಬಗ್ಗೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್.
- ಹೆಲ್ಮೆಟ್ ಧರಿಸುವ ಮುನ್ನ ಕೂದಲನ್ನು ಕಾಟನ್ ಬಟ್ಟೆಯಿಂದ ಕವರ್ ಮಾಡಿ, ಧರಿಸಿ
- ಬೆವರು ಅತಿಯಾದಾಗ ಪದೇ ಪದೇ ಹೆಲ್ಮೆಟ್ ತೆಗೆಯಿರಿ
- ಹೆಲ್ಮೆಟ್ನಲ್ಲಿ ಸ್ಕಾಲ್ಪ ಕ್ಯಾಪ್ ಇರುವಂತಹವುಗಳನ್ನು ಧರಿಸಬಹುದು
- ಹೆಲ್ಮೆಟ್ ಅನ್ನು ಆಗಾಗ್ಗೆ ಶುಚಿಗೊಳಿಸಿ
- ಹೆಲ್ಮೆಟ್ ಅನ್ನು ಗಾಳಿಯಾಡುವ ಪ್ರದೇಶದಲ್ಲಿ ಹೆಚ್ಚಾಗಿ ಇಡಿ
- ದೀರ್ಘ ಕಾಲದ ಪ್ರಯಾಣ ಮಾಡುವ ದ್ವಿಚಕ್ರ ಸವಾರರು, ಕೂದಲನ್ನು ಪದೇ ಪದೇ ಒಣಗಿಸುವುದು ಅಗತ್ಯ.
ಈ ರೀತಿ ಚಿಕಿತ್ಸೆ: ಕೂದಲಿಗೆ ಸೆರಾಂ ಮತ್ತು ಎಣ್ಣೆಯನ್ನು ಬಳಕೆ ಮಾಡುವುದು ಅಗತ್ಯ. ಜೊತೆಗೆ ಕೂದಲಿನ ಆರೋಗ್ಯ ಕಾಪಾಡಲು ಟ್ಯಾಬ್ಲೆಟ್, ಮಾತ್ರೆ ಅಥವಾ ಇನ್ನಿತರ ಔಷಧಿಗಳನ್ನು ಕೂಡ ವೈದ್ಯರ ಸಲಹೆ ಮೇಲೆ ಸೇವಿಸಬಹುದು.