ಬೆಂಗಳೂರು:- ಬೇರೆ ರಾಜ್ಯದಿಂದ ಬೆಂಗಳೂರಿಗೆ ಮಾಂಸ ಸಾಗಾಟ ಪ್ರಕರಣದ ಸಂಬಂಧ ಕಾಟನ್ ಪೇಟೆ ಪೊಲೀಸರು ಬಿಎನ್ಎಸ್ 132 ಆ್ಯಕ್ಟ್ 351 (2) ಅಡಿಯಲ್ಲಿ ಪುನೀತ್ ಕೆರೆಹಳ್ಳಿ ಬಂಧನ ಮಾಡಿದ್ದಾರೆ. ಈ ನಡುವೆ ಪೊಲೀಸ್ ಠಾಣೆಯಲ್ಲಿ ಅಸ್ವಸ್ಥಗೊಂಡಿದ್ದ ಪುನೀತ್ ನನ್ನು ತಕ್ಷಣ ಪೊಲೀಸ್ ಠಾಣೆಯಿಂದ ಕೆ.ಸಿ.ಜನರಲ್ ಆಸ್ಪತ್ರೆಗೆ ವೀಲ್ ಚೇರ್ ನಲ್ಲಿ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ಪುನೀತ್ ಕೆರೆಹಳ್ಳಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ.
ಇನ್ನೂ ರಾಜಸ್ತಾನದಿಂದ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ಗೆ ಬಂದಿದ್ದ 90 ಮಾಂಸದ ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಇದೆ ಎಂಭ ಆರೋಪ ಕೇಳಿ ಬಂದಿದೆ. ಹಿಂದೂಪರ ಸಂಘಟನೆಗಳ ಆರೋಪದ ಮೇಲೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಮಾಂಸವನ್ನ ಸೀಜ್ ಮಾಡಿ ಲ್ಯಾಬ್‌ಗೆ ಕಳಿಸಿದ್ದಾರೆ. ಉದ್ಯಮಿ ಅಬ್ದುಕ್ ರಜಾನ್ ಅನ್ನೋರು ಈ ನಾಯಿ ಮಾಂಸವನ್ನ ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಅರು ನಾಯಿ ಮಾಂಸವಲ್ಲ, ಕುರಿ ಮಾಂಸ ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ. ಇದೇ ವಿಚಾರಕ್ಕೆ ಒಂದಿಷ್ಟು ಮಾತಿನ ಚಕಮಕಿ ಆಗಿದೆ. ಲ್ಯಾಬ್ ರಿಪೋರ್ಟ್ ಬಂದ ಬಳಿಕ ಮಾಂಸದ ಅಸಲಿಯತ್ತು ಬಯಲಾಗಲಿದೆ.