ಬಾಲಕನ ಮೇಲೆ ಅಟ್ಯಾಕ್ ಮಾಡಿದ ನಾಯಿಗಳು: ಸ್ವಲ್ಪದರಲ್ಲೇ ಬಚಾವ್! ಆಗಿದ್ದೇನು ಅಂತೀರಾ!?

0
Spread the love

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಕೆಆರ್ ಪುರಂನ ಸೊನ್ನೆನಹಳ್ಳಿಯಲ್ಲಿ ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ನಾಯಿಗಳ ಗುಂಪೊಂದು ಅಟ್ಯಾಕ್ ಮಾಡಿರುವ ಘಟನೆ ಜರುಗಿದೆ.

Advertisement

ನಾಯಿಗಳು ಅಟ್ಯಾಕ್ ಮಾಡುತ್ತಿದ್ದಂತೆ ತಪ್ಪಿಸಿಕೊಳ್ಳುವ ಸಲುವಾಗಿ ಬಾಲಕ ಓಡಿದ್ದಾನೆ. ಬಾಲಕ ಓಡುತ್ತಿದ್ದಂತೆ ಶ್ವಾನಗಳು ಆತನನ್ನು ಅಟ್ಟಾಡಿಸಿವೆ. ಈ ವೇಳೆ ತಪ್ಪಿಸಿಕೊಳ್ಳುವಾಗ ಬಾಲಕ ನೆಲದ ಮೇಲೆ ಬಿದ್ದಿದ್ದಾನೆ. ಈ ಸಂದರ್ಭ ನಾಯಿಗಳು ಬಾಲಕನ ಮೇಲೆ ಎರಗಿವೆ.

ನಾಯಿಗಳು ತನ್ನ ಮೇಲೆ ಎರಗುತ್ತಿದ್ದಂತೆ ಕೂಡಲೇ ಬಾಲಕ ಕಿರುಚಿಕೊಂಡಿದ್ದು, ಕಿರುಚಾಟ ಕೇಳಿ ಸ್ಥಳೀಯರು ಆಗಮಿಸಿದ್ದಾರೆ. ಸ್ಥಳೀಯರು ಬಂದು ನಾಯಿಗಳನ್ನು ಓಡಿಸಿದ ಹಿನ್ನೆಲೆ ಭಾರೀ ಅನಾಹುತ ತಪ್ಪಿದೆ.


Spread the love

LEAVE A REPLY

Please enter your comment!
Please enter your name here