ನಟ ರಾಕ್ಷಸ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದು, ಕರೆಯೊಲೆ ಹಂಚುತ್ತಿದ್ದಾರೆ. ಇದರ ನಡುವೆ ಇಂದು ನಟ ಡಾಲಿ ಹಾಗು ಧನ್ಯತಾ ಅವರು ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ಜೊತೆಗೆ ಸುತ್ತೂರು ಶ್ರೀ ಮಠಕ್ಕೆ ಭೇಟಿ ನೀಡಿದ್ದಾರೆ. ಮೈಸೂರಿನಿಂದ ವರುಣಾ ಮಾರ್ಗವಾಗಿ ಸುತ್ತೂರು ಪ್ರಯಾಣ ಮಾಡಿದ್ದು, ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಪಡೆದಿದ್ದಾರೆ.
Advertisement
ಶಿವರಾತ್ರಿ ಶಿವಯೋಗಿಗಳ 1065ನೇ ಜಯಂತಿ ಹಿನ್ನೆಲೆ ನಂದಿ ಧ್ವಜಕ್ಕೆ ಪೂಜೆ ಜರುಗಿದೆ. ಬಳಿಕ ನಂದಿ ಧ್ವಜ ಹಿಡಿದು ಡಾಲಿ ಕುಣಿದಿದ್ದಾರೆ. ಡಾಲಿ, ಧನ್ಯತಾ ಜೊತೆ ನಟ ನಾಗಭೂಷಣ್ ಕೂಡ ಸಾಥ್ ನೀಡಿದ್ದಾರೆ. ಇನ್ನೂ ಫೆ.16ರಂದು ಮೈಸೂರಿನಲ್ಲಿ ಡಾಲಿ ಮದುವೆ ಜರುಗಲಿದೆ. ಈ ಮದುವೆಗೆ ರಾಜಕೀಯ ಗಣ್ಯರು, ಸಿನಿಮಾ ಸ್ಟಾರ್‌ಗಳು ಭಾಗಿಯಾಗಲಿದ್ದಾರೆ.