ಸ್ಯಾಂಡಲ್ ವುಡ್ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಹುಟ್ಟುಹಬ್ಬಕ್ಕೆ ಇನ್ನೂ ಎರಡು ದಿನ ಮಾತ್ರವೇ ಭಾಕಿ ಇದೆ. ಹೀಗಾಗಿ ನೆಚ್ಚಿನ ನಟನ ಬರ್ತಡೇಯನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಬೇಕು ಎಂದು ಅಭಿಮಾನಿಗಳು ಆಸೆ ಪಟ್ಟಿದ್ದರು. ಆದ್ರೆ ಈ ವರ್ಷದ ಹುಟ್ಟುಹಬ್ಬದ ಆಚರಣೆಗೆ ಡಾಲಿ ಧನಂಜಯ್ ಬ್ರೇಕ್ ಹಾಕಿದ್ದು ಇದು ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದೆ.
ಆಗಸ್ಟ್ 23ಕ್ಕೆ ಧನಂಜಯ್ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಆದರೆ ಈ ಬಾರಿ ಧನಂಜಯ್ ಬರ್ತಡೇ ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಕೆಲಸದ ನಿಮಿತ್ತ ಹೊರಗಡೆ ಹೋಗುವ ಕಾರಣಕ್ಕೆ ಸಂಭ್ರಮಾಚರಣೆಯನ್ನ ನಿಮ್ಮೊಂದಿಗೆ ಮಾಡುತ್ತಿಲ್ಲ ಎಂದು ಡಾಲಿ ಧನಂಜಯ್ ತಿಳಿಸಿದ್ದಾರೆ. ಸದ್ಯ ಧನಂಜಯ್ ಐತಿಹಾಸಿಕ ಹಲಗಲಿ ಚಿತ್ರ ಸೇರಿದಂತೆ ಇನ್ನೂ ಕೆಲವು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.
‘ನನ್ನ ಪ್ರೀತಿಯ ಅಭಿಮಾನಿಗಳೇ, ಆಗಸ್ಟ್ 23ರಂದು ನನ್ನ ಬರ್ತ್ಡೇ. ಪ್ರತಿ ವರ್ಷ ನನ್ನ ಜನ್ಮದಿನ ಅಂದರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ. ನಿಮ್ಮ ಪ್ರೀತಿ, ನಿಮ್ಮ ಎನರ್ಜಿ, ನಿಮ್ಮ ಸಂಭ್ರಮ ಅದೇ ನನ್ನ ಶಕ್ತಿ. ಆದರೆ ಈ ಬಾರಿ ನಾನು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ. ಈ ಸಂಭ್ರಮಾಚರಣೆಗೆ ನಿಮ್ಮ ಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ದೃಢ ನಂಬಿಕೆಯಿದೆ. ಮುಂದಿನ ಸಲ ಇನ್ನೂ ಡಬ್ಬಲ್ ಎನರ್ಜಿ, ಡಬ್ಬಲ್ ಸಂಭ್ರಮ, ಜೊತೆಗೆ ಆಚರಿಸೋಣ. ಲವ್ ಯೂ ಆಲ್, ಡಾಲಿ’ ಎಂದು ಬರೆದುಕೊಂಡಿದ್ದಾರೆ.