ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹೊರವಲಯದಲ್ಲಿರುವ ವೀರಶೈವ ಲಿಂಗಾಯತ ರುದ್ರಭೂಮಿ ಸಮಿತಿಯವರಿಗೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಮಾರುತಿ ದೇವಸ್ಥಾನ ಗೌಳಿ ಸಮಾಜ ಟ್ರಸ್ಟ್ ವತಿಯಿಂದ ರುದ್ರಭೂಮಿ ಸುಧಾರಣೆಗಾಗಿ 51 ಸಾವಿರ ರೂಪಾಯಿಗಳ ಚೆಕ್‌ನ್ನು ತ್ರಿವಿಧ ದಾಸೋಹಿ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಮಠ ಗೌರವಾಧ್ಯಕ್ಷರು, ಅಧ್ಯಕ್ಷರಾದ ವಿನಾಯಕ ಮಾನ್ವಿ, ಕಾರ್ಯದರ್ಶಿಗಳಾದ ಕೆ.ಎಸ್. ಚೆಟ್ಟಿಯವರಿಗೆ ಚೆಕ್ ನೀಡಿದರು.
ಚೆಕ್ ಸ್ವೀಕರಿಸಿ ವಿನಾಯಕ ಮಾನ್ವಿ ಮಾತನಾಡಿ, ತ್ರಿವಿಧ ದಾಸೋಹಿ ಪೂಜ್ಯ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ನೇತೃತ್ವದಲ್ಲಿ ಈಗಾಗಲೇ ರುದ್ರಭೂಮಿಯಲ್ಲಿ ಮೂಲಭೂತ ಸೌಕರ್ಯಗಳಾದ ಬೀದಿದೀಪ, ವಾಹನ ನಿಲುಗಡೆ ಸ್ಥಳ, ನೀರಿನ ವ್ಯವಸ್ಥೆ, ರುದ್ರಭೂಮಿ ಕಂಪೌಂಡ್ ಮೇಲೆ ತಂತಿ ಬೇಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಈ ರುದ್ರಭೂಮಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಇದನ್ನು ಮನಗಂಡು ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಮಾರುತಿ ದೇವಸ್ಥಾನ ಗೌಳಿ ಸಮಾಜ ಟ್ರಸ್ಟ್, ಸಮಾಜದ ಹಿರಿಯರು ಒಂದೆಡೆ ಸೇರಿ ಹೆಚ್ಚು ಆಸಕ್ತಿಯಿಂದ ರುದ್ರಭೂಮಿ ಸುಧಾರಣೆಗಾಗಿ ಪುನಃ 51 ಸಾವಿರ ರೂಪಾಯಿಗಳ ಸಹಾಯ ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌಳಿ ಸಮಾಜದ ಹಿರಿಯರು, ಮುಖಂಡರು ಹಾಗೂ ಶಿವಯ್ಯ ನಾಲ್ವತವಾಡಮಠ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.