ಸಮುದಾಯ ಭವನ ಕಟ್ಟಡಕ್ಕೆ ದೇಣಿಗೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾ ಘಟಕವು ನರ‍್ಮಿಸುತ್ತಿರುವ ಸಮುದಾಯ ಭವನದ ಕಟ್ಟಡ ನರ‍್ಮಾಣಕ್ಕೆ ಗದುಗಿನ ಗಣ್ಯ ವ್ಯಾಪಾರಸ್ಥರು, ರ‍್ಮಾಭಿಮಾನಿಗಳೂ ಆದ ಶಿವಣ್ಣ ಬಸವಪ್ಪ ಗುಗ್ಗರಿ ಅವರು 51 ಸಾವಿರ ರೂ.ಗಳ ದೇಣಿಗೆ ನೀಡಿದ್ದಾರೆ.

Advertisement

ಮಹಾಸಭಾದ ಗದಗ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರಿಗೆ 51 ಸಾವಿರ ರೂ.ಗಳ ಚೆಕ್ ನೀಡಿದ ಶಿವಣ್ಣ ಅವರು, ಸಮುದಾಯ ಭವನ ಮಾದರಿ ರೀತಿಯಲ್ಲಿ ನರ‍್ಮಾಣಗೊಳ್ಳಲಿ ಎಂದು ಶುಭ ಕೋರಿದರು.

ಚೆಕ್ ಸ್ವೀಕರಿಸಿದ ಗುಡಿಮನಿ, ಕಟ್ಟಡ ನರ‍್ಮಾಣ ಕರ‍್ಯಕ್ಕೆ ಹಲವಾರು ದಾನಿಗಳು ಈಗಾಗಲೇ ವಾಗ್ದಾನ ಮಾಡಿದ್ದು, ದಾನಿಗಳ ಹಾಗೂ ಸಂಸದ, ಸಚಿವರ, ವಿಧಾನ ಪರಿಷತ್ ಸದಸ್ಯರಿಂದ ಅನುದಾನ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಸಾಧ್ಯವಾದಷ್ಟು ಶೀಘ್ರದಲ್ಲಿ ಕಟ್ಟಡ ಸುಂದರವಾಗಿ ರೂಪುಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.

ಈ ಸಂರ‍್ಭದಲ್ಲಿ ಮಹಾಸಭಾದ ಪ್ರಧಾನ ಕರ‍್ಯರ‍್ಶಿ ಮರುಘರಾಜೇಂದ್ರ ಬಡ್ನಿ, ಕೋಶಾಧ್ಯಕ್ಷ ಚನ್ನವೀರಪ್ಪ ಹುಣಶೀಕಟ್ಟಿ, ರುದ್ರಮುನಿ ಹಿರೇಮಠ ಉಪಸ್ಥಿತರಿದ್ದರು. ಸಮುದಾಯ ಭವನ ಕಟ್ಟಡ ಸಮಿತಿಯ ಗೌರವಾಧ್ಯಕ್ಷ ಸದಾಶಿವಯ್ಯ ಮದರಿಮಠ, ಅಧ್ಯಕ್ಷ ಕಿರಣ ಭೂಮಾ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here