ದಾನಿಗಳಿಂದ ಸರಕಾರಿ ಶಾಲೆಗಳ ಸಬಲೀಕರ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸ್ಥಳೀಯ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಸರಸ್ವತಿ ಪೂಜಾ ಸಮಾರಂಭ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಹಾಗೂ ರಂಗೋತ್ಸವ ಕಾರ್ಯಕ್ರಮಗಳು ಜರುಗಿದವು.

Advertisement

ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಚಿದರಲ್ಲದೆ, ಶಾಲೆಗೆ ಸುಮಾರು 20 ಸಾವಿರ ರೂ ಮೌಲ್ಯದ ಸಂಚಾರಿ ಧ್ವನಿವರ್ಧಕಗಳನ್ನು ಕೊಡುಗೆಯಾಗಿ ನೀಡಿದ ಮಹನೀಯರನ್ನು ಸನ್ಮಾನಿಸಿ ದಾನಿಗಳಿಂದ ಸರಕಾರಿ ಶಾಲೆಗಳು ಸಬಲೀಕರಣದತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ದಾನಿಗಳಾದ ಲಲಿತಾ ಮುಸ್ಕಿನಭಾವಿ, ಶಾಂತವ್ವ ಆಲೂರ, ಜಯಶ್ರೀ ಬಿಳ್ಳಾಳ, ಮಾಂತೇಶ ಕುಂಬಾರ, ಮಹಾದೇವಪ್ಪ ಈಟಿ, ರಮೇಶ ಅಬ್ಬಿಗೇರಿ, ರಾಜೇಸಾಬ ಗುಡಗೇರಿ, ಶಿವಪ್ಪ ಕಳಸದ, ಮಹಮ್ಮದ್‌ರಫೀಕ್ ಕಲಾದಗಿ, ಮಂಜಣ್ಣ ಬೂದಿಹಾಳ ಹಾಗೂ 2024ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯೋಪಾಧ್ಯಾಯ ವಾಯ್.ಹೆಚ್. ತಕ್ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ಕುಂಬಾರ, ನಿವೃತ್ತ ಮುಖ್ಯೋಪಾಧ್ಯಾಯ ಸಿ.ಸಿ. ಕುರಹಟ್ಟಿ, ಶೋಭಾ ಮಲ್ಲಾಡದ, ಮಹಾದೇವಪ್ಪ ಈಟಿ, ಮಾಬೂಬಿ ಗುದಗನವರ, ಲಲಿತಾ ಮುಸ್ಕಿನಭಾವಿ, ಪಾರ್ವತಿ ಮಾಡಲಗೇರಿ, ಅನಸಮ್ಮ ಅಂಬಕ್ಕಿ, ಮಂಜುನಾಥ ಬೂದಿಹಾಳ, ಕುಬೇರಪ್ಪ ಬೆಂತೂರ, ರಾಜೇಸಾಬ ಗುಡಗೇರಿ, ರಮೇಶ ಅಬ್ಬಿಗೇರಿ ಭಾಗವಹಿಸಿದ್ದರು.

ಎಸ್.ಹೆಚ್. ಶೆಟ್ಟಿನಾಯಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ವ್ಹಿ. ಮ್ಯಾಗೇರಿ ವರದಿ ವಾಚಿಸಿದರು. ಜೆ.ಎಫ್. ಜ್ಯೋತಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಜೆ.ವಿ. ಹಿರೇಮಠ, ಎಸ್.ಇ. ಹಿರೇಮಠ, ಎಸ್.ಎ. ಮುಂಡೆವಾಡಿ, ಎಮ್.ಎಮ್. ಮುನಶಿ ಉಪಸ್ಥಿತರಿದ್ದರು. ಗಾಯತ್ರಿ ಹಳ್ಳಿ ಸ್ವಾಗತಿಸಿದರು, ವಾಯ್.ವಾಯ್. ಬೆಟಗೇರಿ ನಿರೂಪಿಸಿದರು. ಎ.ಎಸ್. ಕಳಸದ ವಂದಿಸಿದರು.


Spread the love

LEAVE A REPLY

Please enter your comment!
Please enter your name here