ಗದಗ:- ಸಿಎಂ ಬದಲಾವಣೆ ಬಗ್ಗೆ ನನ್ನನ್ನು ಕೇಳಬೇಡಿ.. ಮಲ್ಲಿಕಾರ್ಜುನ ಖರ್ಗೆ ಬಾಯಿ ಮುಚ್ಚಿಕೊಂಡು ಇರಲು ಹೇಳಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸಿಎಂ ಬದಲಾವಣೆ ಚರ್ಚೆ ಕುರಿತಂತೆ ನಗರದಲ್ಲಿ ಮಾತನಾಡಿದ ಅವರು, ಬಾಯಿ ಮುಚ್ಗೊಂಡು ಇರಬೇಕು ಅಂತ ಮಲ್ಲಿಕಾರ್ಜುನ ಖರ್ಗೆ ಆದೇಶವಾಗಿದೆ. ಇದೊಂದು ಬಿಟ್ರೆ ನಂಗೇನೂ ಗೊತ್ತಿಲ್ಲ ಈ ವಿಚಾರವಾಗಿ ಏನೂ ಕೇಳಬೇಡಿ ಎಂದರು.
ಇನ್ನೂ ಸಿಎಂ ಸಿದ್ಧರಾಮಯ್ಯ ಗೆ ಓಬಿಸಿ ಸಲಹಾ ಮಂಡಳಿಗೆ ಸದಸ್ಯತ್ವದ ಸಂಚಲನ ವಿಚಾರವಾಗಿ ಮಾತನಾಡಿ, ಈ ವಿಚಾರದಲ್ಲಿ ಬಿಜೆಪಿಯವರಿಗೆ ಪ್ಯಾಕೇಜ್ ಡೀಲ್ ಆಗಿದೆ ಎಂದು ವ್ಯಂಗ್ಯವಾಡಿದ್ದರು. ಮೂರು ವರ್ಷಗಳ ಕಾಲ ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. ಇಷ್ಟು ದಿನ ಗ್ಯಾರಂಟಿ ಕೊಡಲ್ಲ ಅಂತಿದ್ರು ಈಗ ನಾವು ಗ್ಯಾರಂಟಿ ವಿರೋಧಿಗಳು ಅಲ್ಲ ಅಂತಿದ್ದಾರೆ. ಯಾಕೆಂದರೆ ಜನ ಕ್ಯಾಕರಿಸಿ ಮುಖಕ್ಕೆ ಉಗಿತಾರೆ ಅಂತ ಬಿಜೆಪಿಯವರಿಗೆ ಗೊತ್ತಾಗಿದೆ. ಗ್ಯಾರಂಟಿ ಬಗ್ಗೆ ನಮ್ಮ ಶಾಸಕರು ಯಾರು ವಿರೋಧ ಮಾಡಿಲ್ಲ. ನಾವು ಹೇಳೋದೊಂದು ನೀವು ಬರೆಯೋದೊಂದು ಎಂದು ಮಾಧ್ಯಮಗಳ ವಿರುದ್ಧ ಪರೋಕ್ಷವಾಗಿ ಬೇಸರ ಹೊರ ಹಾಕಿದರು.
ರಾಯರೆಡ್ಡಿ ಗ್ಯಾರಂಟಿ ಬಗ್ಗೆ ವಿರೋಧ ಮಾಡಿಲ್ಲ. ಯಾರೇನೇ ತಿಪ್ಪರಲಾಗ ಹಾಕಿದ್ರೂ ಐದು ವರ್ಷ ಗ್ಯಾರಂಟಿ ನಿಲ್ಲಲ್ಲ ಪ್ರಣಾಳಿಕೆಯ ಉಪಾಧ್ಯಕ್ಷನಾಗಿರೋ ನನಗೆ ಹೆಮ್ಮೆ ಇದೆ ಎಂದರು. ಆರ್ ಎಸ್ ಎಸ್ ಬ್ಯಾನ್ ಮಾಡಬೇಕು ಎಂಬ ಪ್ರಿಯಾಂಕಾ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರೇ ಸಂವಿಧಾನ ವಿರುದ್ಧ ಹೋದರೂ ಅವನ್ನೆಲ್ಲ ಬ್ಯಾನ್ ಮಾಡೋದು ಒಳ್ಳೆಯದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ರೋಣ ಶಾಸಕ ಜಿ ಎಸ್ ಪಾಟೀಲ, ಮುಖಂಡ ಸಿದ್ದು ಪಾಟೀಲ ಸೇರಿದಂತೆ ಇತರರು ಇದ್ದರು.