ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಿಳೆ ಶಾಂತಿ ಮತ್ತು ತಾಳ್ಮೆಯ ಪ್ರತಿರೂಪವಾಗಿದ್ದಾಳೆ. ದೇಶವು ಮಹಿಳೆಯರಿಗೆ ನೀಡುವ ಸ್ಥಾನ-ಮಾನವು ಒಂದು ದೇಶದ ಪ್ರಗತಿಯ ಸಂಕೇತ ಎನ್ನಬಹುದು ಎಂದು ಸಮೀಪದ ಆದರಳ್ಳಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಶ್ರೀಕಾಂತ ನಂದೆಣ್ಣವರ ಹೇಳಿದರು.
ಅವರು ತಾಲೂಕಿನ ಆದರಹಳ್ಳಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಾಲೆಯ ಶಿಕ್ಷಕಿಯರು ಹಾಗೂ ಅಡುಗೆ ಸಹಾಯಕಿಯರನ್ನು ಗೌರವಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯರ ಬಗ್ಗೆ ಕೀಳರಿಮೆ ಬೇಡ. ಇಂದು ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡುವ ಮೂಲಕ ಸಮಾನತೆಯ ಸಂಕೇತವಾಗಿರುವ ಮಹಿಳೆಯರನ್ನು ಗೌರವಿಸುವ, ಪೂಜಿಸುವ ಕೆಲಸ ಆಗಬೇಕು ಎಂದರು.
ಆದರಹಳ್ಳಿ ಪ್ರೌಡಶಾಲೆಯ ಸಹ ಶಿಕ್ಷಕಿ ಮಂಜುಳಾ ಮೆಣಸಿನಕಾಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಶಿಕ್ಷಕರು ಹಾಜರಿದ್ದರು. ವಸಂತಕುಮಾರ ಸ್ವಾಗತಿಸಿದರು. ಚಂದ್ರು ಅಂಟಿ ನಿರೂಪಿಸಿದರು. ಶಂಕರ ಉಪ್ಪಿನ ವಂದಿಸಿದರು.