ಹುಬ್ಬಳ್ಳಿ:– ಗಣೇಶ ಹಬ್ಬದಂದು ಮುಸ್ಲೀಮರಿಂದ ವ್ಯಾಪಾರ ಮಾಡಬೇಡಿ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬಕ್ಕೆ ಧರ್ಮ ಕೇಳಿ ವ್ಯಾಪಾರ ವಹಿವಾಟು ಮಾಡಿ. ಧರ್ಮ ಕೇಳಿ ಪಹಲ್ಗಾಮ್ನಲ್ಲಿ ನಮ್ಮವರನ್ನ ಭೀಕರ ಕೊಲೆ ಮಾಡಲಾಗಿದೆ. ಹಲಾಲ್ ಇದ್ದ ವಸ್ತುಗಳನ್ನ ಖರೀದಿ ಮಾಡಿದ್ರೆ ಶಾಸ್ತ್ರಕ್ಕೆ ವಿರುದ್ಧ ಆಗುತ್ತದೆಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಧರ್ಮದ ಆಧಾರದ ಮೇಲೆ ಗಣೇಶ ಹಬ್ಬ ಆಗಬೇಕು. ಚೀನಾ ದೇಶದ ಗಣೇಶ ಮೂರ್ತಿಗಳು ನಮ್ಮ ದೇಶಕ್ಕೆ ಬಂದಿದೆ, ಮಣ್ಣಿನ ಗಣೇಶನ ಮೂರ್ತಿ ಖರೀದಿ ಮಾಡಿ ಎಂದರು.