ಆರೋಗ್ಯ ತಜ್ಞರ ಪ್ರಕಾರ ಸಂಜೆ 7 ಗಂಟೆಯ ನಂತರ ಭಾರಿ ಆಹಾರ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು, ಹೊಟ್ಟೆಯ ಅಸ್ವಸ್ಥತೆ ಹಾಗೂ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಆಯುರ್ವೇದದ ಪ್ರಕಾರ ಬೇಗನೆ ಊಟ ಮಾಡಿ ಮಲಗುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಮತ್ತು ದೇಹ ಆರೋಗ್ಯವಾಗಿರುತ್ತದೆ. ಹಸಿವಾದಲ್ಲಿ ಲಘು ಆಹಾರಗಳನ್ನು ಮಾತ್ರ ಸೇವಿಸುವುದು ಸೂಕ್ತ. ಆದರೆ ಕೆಲವು ಆಹಾರಗಳನ್ನು ಯಾವುದೇ ಕಾರಣಕ್ಕೂ ಈ ಸಮಯದ ನಂತರ ತಿನ್ನಬಾರದು.
ರಾತ್ರಿ ಸೇವನೆ ಮಾಡಬಾರದ ಆಹಾರಗಳು
ಮಟನ್ ಬಿರಿಯಾನಿ – ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನಾಂಶದಿಂದ ತೂಕ ಹೆಚ್ಚಳ ಹಾಗೂ ಪಿತ್ತಜನಕಾಂಗ ಕಾಯಿಲೆಗಳ ಅಪಾಯ.
ಮಸಾಲೆಯುಕ್ತ ಆಹಾರಗಳು – ಹೊಟ್ಟೆ, ಹೃದಯ ಭಾಗದಲ್ಲಿ ಉರಿ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳ ಸಾಧ್ಯತೆ.
ಸಿಹಿತಿನಿಸುಗಳು – ನಿದ್ರೆಗೆ ಅಡ್ಡಿ, ಹೆಚ್ಚೆಚ್ಚು ತಿನ್ನುವ ಬಯಕೆ, ಜೀರ್ಣಕ್ರಿಯೆ ತೊಂದರೆ.
ಬಜ್ಜಿ, ಪಕೋಡ – ಡೀಪ್-ಫ್ರೈ ಮಾಡಿದ ಆಹಾರದಿಂದ ಗ್ಯಾಸ್ಟ್ರಿಕ್, ಆಮ್ಲೀಯತೆ, ನಿದ್ರೆಗೆ ಅಡ್ಡಿ.
ಕೆಫೀನ್ ಪಾನೀಯಗಳು (ಚಹಾ, ಕಾಫಿ, ಗ್ರೀನ್ ಟೀ) – ನಿದ್ರೆಗೆ ತೊಂದರೆ, ಅಜೀರ್ಣ, ಉಬ್ಬುವಿಕೆ.
ಹೀಗಾಗಿ ಸಂಜೆ 7 ಗಂಟೆಯ ನಂತರ ಕಿಚಡಿ, ಖರ್ಜೂರ ಅಥವಾ ಹಾಲು ಮುಂತಾದ ಲಘು ಆಹಾರಗಳನ್ನು ಸೇವಿಸುವುದು ಆರೋಗ್ಯಕರ.



