ಮೊಸರನ್ನು ಸಾಮಾನ್ಯವಾಗಿ ಬೇಸಿಗೆಯ ಆಹಾರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಬೇಸಿಗೆಯಲ್ಲಿ ನಾವು ಇದನ್ನು ಸಾದಾ ಮೊಸರು, ಮೊಸರು ಜೀರಿಗೆ ತಡ್ಕಾ, ಮೊಸರು ರೈಟಾ ಅಥವಾ ಮೊಸರು ಲಸ್ಸಿ ಇತ್ಯಾದಿ ರೂಪದಲ್ಲಿ ಸೇವಿಸುತ್ತೇವೆ. ಇದರಿಂದ ದೇಹದಲ್ಲಿ ಜಲಸಂಚಯನದ ಮಟ್ಟವು ನಿರ್ವಹಿಸಲ್ಪಡುತ್ತದೆ ಮತ್ತು ಶಾಖದ ಹೊಡೆತವು ತೊಂದರೆಗೊಳಗಾಗುವುದಿಲ್ಲ.
ಆದ್ರೆ ಮೊಸರನ್ನು ರಾತ್ರಿ ವೇಳೆ ಸೇವಿಸುತ್ತಿದ್ದರೆ ಅದು ನಿಧಾನವಾದ ವಿಷ ಎಂದೇ ಆಯುರ್ವೇದದಲ್ಲಿ ವ್ಯಾಖ್ಯಾನಿಸಲಾಗಿದೆ. ಏಕೆಂದರೆ ರಾತ್ರಿ ಸಮಯದಲ್ಲಿ ಮೊಸರಿನ ಜಿಡ್ಡಿನ ಅಂಶಗಳು ದೇಹಕ್ಕೆ ಸೇರಿ ಅದರಿಂದ ಕಫ ಸಮಸ್ಯೆ ಜಾಸ್ತಿಯಾಗುತ್ತದೆ. ಇದರಿಂದ ರಾತ್ರಿ ಸಮಯದಲ್ಲಿ ಮೊಸರಿನ ಬಳಕೆ ಮಾಡದಿರುವುದು ಉತ್ತಮ ಎಂದು ಆಯುರ್ವೇದ ತಿಳಿಸಿದೆ.
ಮೊಸರು ದೇಹಕ್ಕೆ ಒಳ್ಳೆಯದಾದರೂ ಇದನ್ನು ಎಲ್ಲಾ ಸಮಯದಲ್ಲೂ ಸೇವನೆ ಮಾಡಬಾರದು ಎಂದು ಹೇಳಲಾಗುತ್ತದೆ. ಅದರಲ್ಲೂ ಕಫ ಪ್ರವೃತ್ತಿ ಇರುವಂತಹ ಜನರು ರಾತ್ರಿ ಮೊಸರು ಸೇವನೆ ಮಾಡಲೇಬಾರದು ಎಂದು ಹೇಳಲಾಗುತ್ತದೆ.
ಅದರಲ್ಲೂ ಅಸ್ತಮಾ ಮತ್ತು ಮೂಳೆ ಸಮಸ್ಯೆ ಇರುವ ಜನರು ಮೊಸರನ್ನು ರಾತ್ರಿ ವೇಳೆ ಸೇವಿಸಲೇಬಾರದು. ಮೊಸರಿನಲ್ಲಿ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಇತರ ಕೆಲವೊಂದು ಖನಿಜಾಂಶಗಳು ಇವೆ. ಇದು ಮೂಳೆ ಹಾಗೂ ಹಲ್ಲುಗಳಿಗೆ ಅಗತ್ಯವಾಗಿ ಬೇಕು. ಆದರೆ, ರಾತ್ರಿಗಿಂತಲೂ ಹಗಲು ಹೊತ್ತಿನಲ್ಲಿ ಮೊಸರು ಸೇವಿಸುವುದು ಉತ್ತಮ.