ChatGPT ನಿಂದ ವಿಶೇಷವಾಗಿ ವಿನ್ಯಾಸವಾಗಿರುವ ಸ್ಟುಡಿಯೋ ಘಿಬ್ಲಿ ಶೈಲಿಯ AI ಚಿತ್ರಗಳು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯದವರೆಗೂ ChatGPT ಯ ಸ್ಟುಡಿಯೋ ಘಿಬ್ಲಿಯಲ್ಲಿ ತಮ್ಮ ಫೋಟೋಗಳನ್ನು ಕಾರ್ಟೂನ್ ಇಮೇಜ್ ಗಳಾಗಿ ಪರಿವರ್ತಿಸಿ ಎಲ್ಲರೂ ಖುಷಿ ಪಡುತ್ತಿದ್ದಾರೆ. ಆದರೆ ಇದು ಎಷ್ಟು ಡೇಂಜರ್ ಅಂತ ಎಷ್ಟೋ ಮಂದಿಗೆ ತಿಳಿದಿಲ್ಲ.
ವೈರಲ್ ಆಗುತ್ತಿರುವ ಘಿಬ್ಲಿ ಟ್ರೆಂಡ್ ಗೌಪತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ತಜ್ಞರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ‘AI ಪ್ಲಾಟ್ ಫಾರ್ಮ್ ನಲ್ಲಿ ವೈಯಕ್ತಿಕ ಫೋಟೋ ಗಳನ್ನು ಅಪ್ಲೋಡ್ ಮಾಡುವ ಮುನ್ನ ಇದು ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ? ಎಂದು ಒಮ್ಮೆ ತಿಳಿದುಕೊಳ್ಳಿ’ ಎಂದಿದ್ದಾರೆ.
Lusiza Jarovsky ಹೆಸರಿನ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು ಇದರಲ್ಲಿ, ‘ಬಳಕೆದಾರರು ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿದ ಬಳಿಕ ಆ ಫೋಟೋಗಳ ಬಳಕೆಯ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಈ ಓಪನ್ ಎಐನ ಗೌಪ್ಯತಾ ನೀತಿಯು ಬಳಕೆದಾರರ ಇನ್‌ಪುಟ್ ಅನ್ನು ಮಾದರಿ ತರಬೇತಿಗಾಗಿ ಬಳಸಬಹುದು, ಇದರಿಂದ ಬಳಕೆದಾರರಿಗೆ ಎದುರಾಗುವ ಅಪಾಯವೇ ಹೆಚ್ಚು ಎಂದು ತಿಳಿಸಿದ್ದಾರೆ.
ಈ ಆಪ್ ಗಳಲ್ಲಿ ಬಳಕೆದಾರರು ಫೋಟೋ ಅಪ್‌ಲೋಡ್ ಮಾಡಿದ ಬಳಿಕ, ಫೋಟೋ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಈ ಫೋಟೋಗಳು ತಮ್ಮ ಉದ್ದೇಶಗಳಿಗೂ ಬಳಸಬಹುದು. ಮಾನಹಾನಿ ಹಾಗೂ ಕಿರುಕುಳಕ್ಕೆ ಬಳಸಬಹುದಾದ ವಿಷಯವನ್ನು ರಚಿಸಲು ಸಹ ಬಳಸಬಹುದು. ಅದಲ್ಲದೇ, ಬೇರೋಬ್ಬರ ಗುರುತನ್ನು ಕದಿಯುವ ಮೂಲಕ ನೀವು ಅಪ್‌ಲೋಡ್ ಮಾಡುವ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ನೂರಕ್ಕೆ ನೂರರಷ್ಟಿದೆ ಎಂದು ಹೇಳಿದ್ದಾರೆ.
ಅದಲ್ಲದೇ, ಜನರ ವೈಯಕ್ತಿಕ ಫೋಟೋಗಳನ್ನು ವೈಯಕ್ತಿಕಗೊಳಿಸಿದ ಜಾಹೀರಾತುಗಳಿಗಾಗಿ ಬಳಸಬಹುದು. ಇನ್ನು ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡುವ ಮೂಲಕ ತಪ್ಪು ಉದ್ದೇಶಗಳಿಗೆ ಬಳಸಬಹುದು. ಈ ಘಿಬ್ಲಿ ಸ್ಟೈಲ್ ಫೋಟೋಗಳ ಅನಧಿಕೃತ ಬಳಕೆಯು ಕಾನೂನು ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬಳಕೆದಾರರು ತಮ್ಮ ವೈಯುಕ್ತಿಕ ಫೋಟೋ ಅಪ್ಲೋಡ್ ಮಾಡುವಾಗ ಎಚ್ಚರ ವಹಿಸಬೇಕು ಎಂದಿದ್ದಾರೆ.