ಮತಾಂತರದ ಕುತಂತ್ರಕ್ಕೆ ಬಲಿಯಾಗದಿರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ಮತಾಂತರ ಹಾವಳಿ ಹೆಚ್ಚಾಗುತ್ತಿದೆ. ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ ಹಿಂದೂ ಯುವಕನನ್ನು ಬಲವಂತವಾಗಿ ಹೆದರಿಸಿ, ಬೆದರಿಸಿ ನಮಾಜ್ ಮಾಡಿಸಲಾಗುತ್ತಿದೆ. ಜೊತೆಗೆ, ನಮಾಜ್ ಮಾಡುತ್ತಿರುವ ದೃಶ್ಯವನ್ನು ಸೆರೆಹಿಡಿದು ತನ್ನ ಹೆಂಡತಿಗೆ ಕಳುಹಿಬೇಕಾದ ಹಿಂಸೆಯನ್ನು ವಿಶಾಲ್ ಗೋಕಾವಿ ಎನ್ನುವ ಹಿಂದೂ ಯುವಕ ಅನುಭವಿಸಿದ್ದಾನೆ. ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಆಗ್ರಹಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡುತ್ತಿದ್ದರು.

ವಿಶಾಲ್ ಗೋಕಾವಿ ದಿನಕ್ಕೆ ಐದು ಹೊತ್ತು ನಮಾಜ್ ಮಾಡಬೇಕು. ಮಾಡದಿದ್ದರೆ ನಿನ್ನ ಮೇಲೆ ಕೇಸ್ ದಾಖಲಿಸುತ್ತೇನೆ ಎಂದು ತಾನು ಕೈಹಿಡಿದ ಹೆಂಡತಿ ಹೆದರಿಸಿ, ಬಲವಂತವಾಗಿ ಮುಳಗುಂದ ನಾಕಾದ ಹತ್ತಿರದ ಮಸೀದಿಗೆ ಕರೆದುಕೊಂಡು ಹೋಗಿ ನಮಾಜ್ ಮಾಡಿಸುತ್ತಾಳೆ. ವಿಶಾಲ್ ನಮಾಜ್ ಮಾಡುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ತನ್ನ ಹೆಂಡತಿಯ ವಾಟ್ಸಪ್‌ಗೆ ಕಳುಹಿಸಬೇಕಿತ್ತು. ಈ ಕೆಲಸವನ್ನು ಹುಡುಗಿಯ ಸೋದರ ಮಾವ ಮಾಡುತ್ತಿದ್ದ. ಇಂತಹ ಮತಾಂತರದ ವಿರುದ್ಧ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಧರ್ಮ ಉಳಿಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದು ಪ್ರಕರಣದಲ್ಲಿ ಬೆಟಗೇರಿಯ ಶಮ್ಸುದ್ದಿನ್ ಮತ್ತು ತಂಡದವರು ಹಿಂದೂ ಯುವಕರನ್ನು ಗುರಿಯಾಗಿಸಿ ಮತಾಂತರ ಮಾಡಿಸುತ್ತಾರೆ. ಮತ್ತೋರ್ವ ಹಿಂದೂ ಯುವಕನನ್ನು ಹಿಂದೂ ಸಂಪ್ರದಾಯದಂತೆ ಮುಸ್ಲಿಂ ಹುಡುಗಿಯ ಜೊತೆ ಮದುವೆ ಮಾಡಿಸುತ್ತಾರೆ. ಅವರಿಗೆ ಜನಿಸಿದ ಮಕ್ಕಳಿಗೆ ಮುಸ್ಲಿಂ ಹೆಸರು ಇಡಲಾಗಿದೆ. ತಂದೆಗೆ ತಿಳಿಯದೇ ಮಕ್ಕಳಿಗೆ ಮುಂಜವಿ ಕೂಡ ಮಾಡಲಾಗಿದ್ದು, ಗದಗ ಮತಾಂತರ ತವರೂರುರಾಗಿ ಬದಲಾಗಿದೆ ಎಂದು ಆರೋಪಿಸಿದರು.

ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಮುಳಗುಂದ ನಾಕಾದ ಮಸಿದಿಯನ್ನು ಸೀಜ್ ಮಾಡಬೇಕು. ಈ ಬಗ್ಗೆ ನಾವು ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ದೂರು ದಾಖಲಿಸಿದ್ದೇವೆ. ಇವರ ಹಿಂದೆ ಕಾಣದ ಕೈಗಳು ದೊಡ್ಡ ಮಟ್ಟದಲ್ಲಿ ಇದ್ದು, ಅವುಗಳನ್ನು ಪತ್ತೆ ಹಚ್ಚಬೇಕಿದೆ. ಜುಲೈ 17ರಂದು ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರಾಜು ಡಮಾಮ್, ಮಹೇಶ್ ರೋಖಡೆ, ಕುಮಾರ ನಡಗೇರಿ, ರಾಚೋಟಿ ಕಾಡಪ್ಪನವರ, ಕಿರಣ್ ಹಿರೇಮಠ, ಸತೀಶ್ ಕುಂಬಾರ, ಶಿವಯೋಗಿ ಹಿರೇಮಠ, ಅರುಣಕುಮಾರ ಬಜಿ, ಮಂಜುನಾಥ ಬೆಂತೂರ ಉಪಸ್ಥಿತರಿದ್ದರು.

“ಕರ್ನಾಟಕದ ಎಲ್ಲ ಮಠಾಧೀಶರು ಲವ್ ಜಿಹಾದ್, ಮತಾಂತರದ ಬಗ್ಗೆ ದ್ವನಿ ಎತ್ತುತ್ತಿಲ್ಲ. ಮಾತೆತ್ತಿದರೆ ಹಿಂದೂ-ಹಿಂದೂ ಎನ್ನುವ ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ದ್ವನಿ ಎತ್ತುತ್ತಿಲ್ಲ. ಇಂತಹ ಕುತಂತ್ರಕ್ಕೆ ಹಿಂದೂ ಯುವಕರು ಯಾವುದೇ ಕಾರಣಕ್ಕೂ ಬಲಿ ಆಗಬಾರದು. ನಿಮ್ಮ ಸಂಪರ್ಕಕ್ಕೆ ಅಂತಹ ವ್ಯಕ್ತಿಗಳು ಕಂಡುಬAದರೆ ತಕ್ಷಣ ದೂರು ನೀಡಿ”

– ರಾಜು ಖಾನಪ್ಪನವರ.

ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ.


Spread the love

LEAVE A REPLY

Please enter your comment!
Please enter your name here