ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳ ಆಮಿಷಕ್ಕೆ ಬಲಿಯಾಗದೇ ದೇಶದ ಭವಿಷ್ಯವನ್ನು ರೂಪಿಸುವ ಬಿಜೆಪಿಯನ್ನು ಬೆಂಬಲಿಸಿ, ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ನರಗುಂದ ಮತಕ್ಷೇತ್ರದ ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ವಿನಂತಿಸಿದರು.
ಇಲ್ಲಿಯ 6, 8, 9 ಮತ್ತು 10ನೇ ವಾರ್ಡ್ ಗಳಲ್ಲಿ ಬಾಗಲಕೋಟ ಲೋಕಸಭಾದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇಂದು ಕಾಂಗ್ರೆಸ್ ಪಕ್ಷವು ವಿಧಾನಸಭೆಯಲ್ಲಿ ಆಮಿಷವೊಡ್ಡಿ ಮತ ಪಡೆದಂತೆ ಲೋಕಸಭಾ ಚುನಾವಣಿಯಲ್ಲಿಯೂ ಸಹ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಗಳನ್ನೂ ವಿತರಿಸಿ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ನೀಡುವುದಾಗಿ ಮತದಾರರನ್ನು ಸೆಳೆಯುತ್ತಿದ್ದಾರೆ. 65 ವರ್ಷ ಆಳಿದ ಕಾಂಗ್ರೆಸ್ ಪಕ್ಷವು ಇಂತಹ ಉಚಿತ ಗ್ಯಾರಂಟಿಗಳನ್ನು ಅಧಿಕಾರದಲ್ಲಿದ್ದಾಗ ಮಾಡದೇ ಈಗ ಸೋಲುವ ಭಯದಿಂದ ಹಣದ ಆಮಿಷ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾ.ಪಂ ಮಾಜಿ ಸದಸ್ಯ ಅಂದಪ್ಪ ತಿಮ್ಮಾಪೂರ, ಗ್ರಾ.ಪಂ ಮಾಜಿ ಅಧ್ಯಕ್ಷೆ ಲಲಿತಾ ಗೌಡರ, ಯುವ ಮುಖಂಡ ಮಹೇಶ ಮುಸ್ಕಿನಭಾವಿ, ಯುವ ಧುರೀಣ ಮರಿಯಪ್ಪ ವಡ್ಡರ,
ಗ್ರಾ.ಪಂ ಸದಸ್ಯರಾದ ರುದ್ರಪ್ಪ ಮುಸ್ಕಿನಭಾವಿ, ವೀರಣ್ಣ ಚಕ್ರಸಾಲಿ, ಮಹಾಂತೇಶ ಕಮತರ, ಮಂಜುಳಾ ಮೆಣಸಿನಕಾಯಿ, ಶಿವಪ್ಪ ಬಳಿಗೇರ, ವಿರುಪಾಕ್ಷಿ ಬೆಟಗೇರಿ, ಮಂಜುಳಾ ಪೂಜಾರ, ಎಸ್.ಬಿ. ಕಲಕೇರಿ, ದತ್ತಣ್ಣ ಜೋಶಿ, ಈರಪ್ಪ ಅಜಿನಾಳ, ಕಳಕೇಶ ಟೆಂಗಿನಕಾಯಿ, ಎಂ.ಎಂ. ಹುಬ್ಬಳ್ಳಿ, ಶರಣಯ್ಯ ಮುಳಕೊಂಪಿಮಠ, ಚಂದ್ರಗೌಡ ಪಾಟೀಲ, ಉಪಸ್ಥಿತರಿದ್ದರು. ಮರಿಯಪ್ಪ ವಡ್ಡರ ಸ್ವಾಗತಿಸಿದರು. ಮುಖಂಡ ಪ್ರಕಾಶ ಅರಹುಣಸಿ ನಿರೂಪಿಸಿದರು. ವೆಂಕಟೇಶ ದೊಂಗಡೆ ವಂದಿಸಿದರು.
ಬಿಜೆಪಿ ಹಿರಿಯ ಮುಖಂಡ ವಸಂತ ಮೇಟಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ವಿದ್ಯುತ್ ದರ, ಮುದ್ರಾಂಕ ಶುಲ್ಕ, ಮದ್ಯ ಸೇರಿದಂತೆ ದಿನಸಿ ವಸ್ತುಗಳು ದುಬಾರಿಯಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಶೇ. 55ರಷ್ಟು ಆಸ್ತಿ ಸರಕಾರದ ಪಾಲಾಗಲಿದೆ. ಇಡೀ ದೇಶವೇ ಕೊರೋನಾ ರೋಗದಿಂದ ಬಳಲುತ್ತಿರುವಾಗ ಉಚಿತವಾಗಿ ವ್ಯಾಕ್ಸಿನ್ ನೀಡಿ ಬಿಜೆಪಿ ಸರಕಾರ ಕಾಪಾಡಿದೆ. ಪಕ್ಷದಿಂದ ದೇಶದ ಗೌರವ, ಘನತೆ ಹೆಚ್ಚಾಗಿದ್ದು, ಮೋದಿ ಮತ್ತೊಮ್ಮೆ ಪ್ರದಾನಿಯಾಗುವುದು ಖಚಿತ ಎಂದರು.