ನಮ್ಮ ಜಾತಿ ಸಂಖ್ಯೆ ಕಡಿಮೆ ಆಯ್ತು ಅಂತಾ ಪರಸ್ಪರ ಮಂಗ್ಯಾಗಳ ತರ ಕಿತ್ತಾಡಬೇಡಿ: ಪ್ರತಾಪ್ ಸಿಂಹ

0
Spread the love

ಮೈಸೂರು: ನಮ್ಮ ಜಾತಿ ಸಂಖ್ಯೆ ಕಡಿಮೆ ಆಯ್ತು ಅಂತಾ ಪರಸ್ಪರ ಮಂಗ್ಯಾಗಳ ತರ ಕಿತ್ತಾಡಬೇಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮ ಜಾತಿ ಸಂಖ್ಯೆ ಕಡಿಮೆ ಆಯ್ತು ಅಂತಾ ಪರಸ್ಪರ ಮಂಗ್ಯಾಗಳ ತರ ಕಿತ್ತಾಡಬೇಡಿ. ಹಿಂದೂಗಳಾಗಿ ಈ ಜಾತಿಗಣತಿ ನೋಡಿ. ಯಾರ ಮನೆಗೆ ಬಂದು ಜಾತಿಗಣತಿ ಮಾಡಿದ್ದಾರೆ? ಸಿಎಂ ಎಲ್ಲರನ್ನು ಕುರಿ ಮಾಡುತ್ತಿದ್ದಾರೆ ಎಂದರು.

Advertisement

ಇನ್ನೂ ಆಗ ಅಹಿಂದ ಅಂತಾ ಒಂದು ವರ್ಗ ಒಡೆದರು. ಈಗ ಜಾತಿಗಣತಿ ಹೆಸರಲ್ಲಿ ಇಡೀ ಹಿಂದೂ ಧರ್ಮ ಒಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ. ಬೆಲೆ ಏರಿಕೆಯಾಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ ನಡೆದಿದೆ. ಇವೆಲ್ಲವನ್ನು ಮರೆ ಮಾಚಲು ಜಾತಿಗಣತಿ ಬಿಚ್ಚಿಟ್ಟಿದ್ದಾರೆ.

ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮಾಡುತ್ತಿರುವ ನಾಟಕ ಇದು. ಕಾಂಗ್ರೆಸ್‌ನಲ್ಲಿ 35 ಜನ ವೀರಶೈವ ಶಾಸಕರಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಮ್ಮ ಕುರ್ಚಿ ಬಿಟ್ಟು ಕೊಡುತ್ತಾರಾ? ಲಿಂಗಾಯತರಿಗೆ, ಒಕ್ಕಲಿಗರು, ಒಬಿಸಿ ಎಲ್ಲದರಲ್ಲೂ ಉಪಜಾತಿ ಲೆಕ್ಕ ಹಾಕಲಾಗಿದೆ. ಮುಸ್ಲಿಂ, ಕ್ರಿಶ್ಚಿಯನ್‌ರಲ್ಲಿ ಉಪಜಾತಿ ಯಾಕೆ ಲೆಕ್ಕ ಹಾಕಿಲ್ಲ ಎಂದು ಪ್ರಶ್ನಿಸಿದರು.


Spread the love

LEAVE A REPLY

Please enter your comment!
Please enter your name here