ಡೆಂಗ್ಯೂ ಜ್ವರ ಕಡಿಮೆ ಆಗಿದೆ ಅಂತ ಎಚ್ಚರ ತಪ್ಪಬೇಡಿ: ಇಲ್ಲಾಂದ್ರೆ ಪ್ರಾಣಾಪಾಯ ಗ್ಯಾರಂಟಿ!

0
Spread the love

ಬೆಂಗಳೂರು:- ಬೆಂಗಳೂರು ಸೇರಿ ರಾಜ್ಯದಾದ್ಯಂತ ಡೆಂಗ್ಯೂ ಜ್ವರದ ಹಾವಳಿ ಜೋರಾಗಿದೆ.

Advertisement

ಎಲ್ಲರಿಗೂ ತಿಳಿದಿರುವಂತೆ ಡೆಂಗ್ಯೂ ಸೊಳ್ಳೆಯಿಂದ ಹರಡುವ ಸೋಂಕು. ಜ್ವರ, ತಲೆನೋವು ಮತ್ತು ದೇಹದ ನೋವುಗಳಂತಹ ಸೌಮ್ಯ ಲಕ್ಷಣಗಳಿಂದ ಉಂಟಾಗುವ ಡೆಂಗ್ಯೂ ಪ್ರಾರಂಭದಲ್ಲಿ ಸಾಮಾನ್ಯ ಜ್ವರದಂತೆಯೇ ಭಾಸವಾಗುತ್ತದೆ. ಸಾಮಾನ್ಯವಾಗಿ ಜ್ವರ ಪ್ರಾರಂಭವಾದ 3-7 ದಿನಗಳ ನಂತರ ಕಾಣಿಸಿಕೊಳ್ಳುತ್ತವೆ ಜ್ವರವೆಂದು ನಿರ್ಲಕ್ಷಿಸಿ ಕೇವಲ ಜ್ವರ, ಮೈ-ಕೈ ನೋವಿನ ಮಾತ್ರೆ ತೆಗೆದುಕೊಂಡು ಸುಮ್ಮನಾದರೆ ಸಾಲದು. ಇಷ್ಟು ನಿರ್ಲಕ್ಷ್ಯ ಮಾಡಿದ್ರೆ ಪ್ರಾಣಾಪಾಯ ಗ್ಯಾರಂಟಿ.

ಸಾಕಷ್ಟು ಜನರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಬಿಳಿ ರಕ್ತಕಣಗಳ ಬಗ್ಗೆ ಅಷ್ಟಾಗಿ ಅರಿವಿರುವುದಿಲ್ಲ. ಆದರೆ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಬಿಳಿರಕ್ತ ಕಣಗಳ ಪಾತ್ರ ದೊಡ್ಡದು. ಇದರ ಪ್ರಮಾಣ ಕುಸಿದರೆ ಜೀವವೇ ಹೋಗಬಹುದು. ಡೆಂಗ್ಯೂ ಬಂದ ವಾಸಿಯಾದ ಬಳಿಕ ಬಿಳಿರಕ್ತಕಣಗಳು, ಸಣ್ಣ ರಕ್ತ ಕಣ್ಣಗಳು ಕುಸಿತದ ಜೊತೆಗೆ ರಕ್ತವು ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೂಡಲೇ ದೇಹದಲ್ಲಿ ಪ್ಲೇಟ್‌ಲೇಟ್ಸ್‌ಗಳನ್ನು ಹೆಚ್ಚಿಸುವ ಚಿಕಿತ್ಸೆ ಪಡೆಯುವುದು ಅತಿ ಅವಶ್ಯಕ

ಕೇವಲ ಪ್ಲೇಟ್‌ಲೇಟ್ಸ್‌ಗಳು ಕಡಿಮೆಯಾಗುವುದಷ್ಟೇ ಅಲ್ಲದೆ, ದೇಹದ ಒಳಗಡೆ ರಕ್ತಸ್ರಾವವಾಗುವ ಸಾಧ್ಯತೆಯೂ ಹೆಚ್ಚು. ಹೊಟ್ಟೆ, ಕರುಳು, ಯಕೃತ್‌, ಮೆದುಳು ಸೇರಿದಂತ ವಿವಿಧ ಅಂಗಗಳಲ್ಲಿ ಈ ಆಂತರಿಕ ರಕ್ತಸ್ತ್ರಾವವಾಗಬಹುದು. ಆಂತರಿಕ ರಕ್ತಸ್ರಾವದ ಲಕ್ಷಣಗಳು ಪ್ರಾರಂಭದಲ್ಲಿ ಸೂಕ್ಷ್ಮವಾಗಿದ್ದರೂ, ನಂತರದಲ್ಲಿ ವೇಗವಾಗಿ ಪ್ರಗತಿ ಹೊಂದಬಹುದು. ನಿರಂತರ ವಾಂತಿ, ಕಪ್ಪು ಮಲ, ಮೂತ್ರದಲ್ಲಿ ರಕ್ತ, ತೀವ್ರವಾದ ಹೊಟ್ಟೆ ನೋವು ಇದು ಆಂತರಿಕ ರಕ್ತಸ್ತ್ರಾವದ ಲಕ್ಷಣಗಳು.

ಡೆಂಗ್ಯುಗೆ ಇಂಥದ್ದೇ ನಿಖರ ಚಿಕಿತ್ಸೆಗಳಿಲ್ಲ. ಹೆಚ್ಚು ಜ್ವರವಿದ್ದರೆ, ಅದರ ನಿಯಂತ್ರಣಕ್ಕೆ ವೈದ್ಯರು ಔಷಧಿ ನೀಡಲಿದ್ದಾರೆ. ಒಂದು ವೇಳೆ ಪ್ಲೇಟ್‌ಲೆಟ್ಸ್‌ಗಳ ಕುಸಿತ ಕಂಡು ಬಂದರೆ ಕೂಡಲೇ ಅವರಿಗೆ ಆಸ್ಪತ್ರೆಯಲ್ಲಿ ತುರ್ತು ಮೇಲ್ವಿಚಾರಣೆಯ ಅಗತ್ಯವಿರುತ್ತದೆ. ಪ್ಲೇಟ್‌ಲೇಟ್‌ಗಳ ಸಂಖ್ಯೆ ಕುಸಿಯುತ್ತಲೇ ಇದ್ದರೆ, ವೈದ್ಯರು ಪ್ಲೇಟ್‌ಲೇಟ್‌ಗಳನ್ನು ದೇಹಕ್ಕೆ ಡ್ರಿಪ್ಸ್‌ ಮೂಲಕ ಹಾಕಲಾಗುತ್ತದೆ

ಮೊದಲಿಗೆ ನಿಮ್ಮ ಸುತ್ತಲಿನ ಪ್ರದೇಶವನ್ನು ಸೊಳ್ಳೆ ಮುಕ್ತಗೊಳಿಸಿಕೊಳ್ಳಿ. ಎಲ್ಲಿಯೂ ನೀರು ನಿಲ್ಲದಂತೆ ನಿಗಾ ವಹಿಸಿ. ಈ ಮೂಲಕ ಡೆಂಗ್ಯೂ ಹರಡದಂತೆ ಎಚ್ಚರ ವಹಿಸಿ.


Spread the love

LEAVE A REPLY

Please enter your comment!
Please enter your name here