ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮಂಗಳಾ ಎಜ್ಯುಕೇಶನ್ ಟ್ರಸ್ಟ್‌ನ ಮಂಗಳಾ ಬಚಪನ್ ಪ್ಲೇಸ್ಕೂಲ್ ಮಕ್ಕಳಿಗೆ ಶಿಕ್ಷಣದೊಂದಿಗೆ ಮೌಲಿಕ ಸಂಸ್ಕಾರ ನೀಡುತ್ತಿದ್ದು, ಮಾದರಿಯಾಗಿ ಮಕ್ಕಳ ಮನೋವಿಕಾಸ ಕಾರ್ಯವನ್ನು ಇಲ್ಲಿನ ಶಿಕ್ಷಕಿಯರು ಮಾಡುತ್ತಿದ್ದಾರೆ ಎಂದು ಹಾವೇರಿ ಜಿಲ್ಲಾಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ, ಚಿಕ್ಕ ಮಕ್ಕಳ ತಜ್ಞರಾದ ಡಾ. ನವೀನ ಬಿ. ಸಂಗೂರಮಠ ಹೇಳಿದರು.
ಅವರು ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಬನಪ್ಪ ಸಂಕಪ್ಪ ಸಂಕಣ್ಣವರ ಸಭಾಭವನದಲ್ಲಿ ಮಂಗಳಾ ಎಜ್ಯುಕೇಶನ್ ಟ್ರಸ್ಟ್‌ನ ಅಡಿಯಲ್ಲಿ ಕಾರ್ಯನಿರ್ವಹಿಸುವ ಬಚಪನ್ ಪ್ಲೇಸ್ಕೂಲ್‌ನ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪೋಷಕರು ಮಕ್ಕಳಿಗೆ ಮೊಬೈಲ್ ಕೊಟ್ಟು ಅದರ ಗೀಳು ಬೆಳೆಸಬೇಡಿ. ಮಕ್ಕಳಿಗೆ ಕಥೆ, ಆಕಾಶ, ಪರಿಸರ, ಪ್ರಾಣಿ-ಪಕ್ಷಿಗಳನ್ನು ತೋರಿಸುತ್ತ ಧನಾತ್ಮಕ ಮನೋಭಾವ ಬೆಳೆಸಿ ಎಂದರು.
ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಅಮರೇಶ ಕೆ. ನಾಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟ್ರಸ್ಟ್‌ನ ಕಾರ್ಯದರ್ಶಿ ಡಾ. ಸರ್ವಮಂಗಳಾ ಎ. ನಾಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಂಗಳೂರಿನ ದಂತ ವೈದ್ಯರಾದ ಡಾ. ಶ್ವೇತಾ ಎ. ನಾಶಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಸಂಯೋಜಕರಾದ ನೇತ್ರಾವತಿ ವಿನೇಕರ್ ಸ್ವಾಗತಿಸಿ ವಂದಿಸಿದರು.



