ಬೆಂಗಳೂರು:- ಮನೆ ಬಳಿ ಗಲಾಟೆ ಮಾಡ್ಬೇಡಿ ಅಂದಿದ್ದಕ್ಕೆ ಪುಂಡರು ದಾಂದಲೆ ನಡೆಸಿದ್ದು, ನಾಲ್ಕು ಬೈಕ್,ಹೂವಿನ ಪಾಟ್ ಗಳನ್ನು ಪುಡಿ-ಪುಡಿ ಮಾಡಿದ್ದಾರೆ.
ಬಿಳೆಕಹಳ್ಳಿ 7 ನೇ ಕ್ರಾಸ್ ನಲ್ಲಿ ಶನಿವಾರ ರಾತ್ರಿ ಈ ಘಟನೆ ಜರುಗಿದೆ. ನಿತಿನ್ ಗ್ಯಾಂಗ್, ಕೋಡಿಚಿಕ್ಕನಹಳ್ಳಿಯಿಂದ ಬಂದು ದಿನಾಲೂ ಮನೆ ಬಳಿ ನಿಂತು ಸಿಗರೇಟ್ ಸೇದುತ್ತಾ ಎಣ್ಣೆ ಹೊಡೆಯುತ್ತಾ ಕಿರಿಕಿರಿ ಮಾಡ್ತಿದ್ದರು. ಅಲ್ಲದೇ ಬೈಕ್ ನಿಲ್ಲಿಸಿಕೊಂಡು ಮಧ್ಯ ರೋಡಲ್ಲಿ ಪಟಾಕಿ ಹೊಡೆದು ಜನರಿಗೆ ಹಿಂಸೆ ನಿಡ್ತಿದ್ರು. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ಆದ್ರೆ ಯಾವುದೇ ಪ್ರಯೋಜನ ಆಗಿರಲಿಲ್ಲ.
ಅದರಂತೆ ಶನಿವಾರ ಕೂಡ ಪುಂಡರು ರಸ್ತೆಯಲ್ಲಿ ಬೈಕ್ ಅಡ್ಡಹಾಕಿಕೊಂಡು ಸಮಸ್ಯೆ ಮಾಡಿದ್ದಾರೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಅರುಣ್ ಮನೆ ಮುಂದೆ ಪುಂಡರು ದಾಂದಲೆ ಮಾಡಿದ್ದಾರೆ. ಅರುಣ್ ಬೈಕ್ ಸೇರಿ ಸ್ಥಳೀಯರ ಬೈಕಗಳ ಮೇಲೆ ಕಲ್ಲು ಎತ್ತಿಹಾಕಿ ದಾಂದಲೆ ತೋರಿದ್ದಾರೆ. ಪುಂಡರ ಅಟ್ಟಹಾಸ ಸ್ಥಳೀಯರ ಮೊಬೈಲ್ ಹಾಗೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೈಕೊಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



