BBK11: ನನ್ನನ್ನು ಮಾತಾಡಿಸ್ಬೇಡಿ: ಮಂಜುಗೆ ನೇರ ವಾರ್ನಿಂಗ್ ಕೊಟ್ಟ ಗೌತಮಿ!

0
Spread the love

ಬಿಗ್ ಬಾಸ್ ಸೀಸನ್ 11 ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಿದ್ದು, ಸ್ಪರ್ಧಿಗಳು ಜಿದ್ದಾಜಿದ್ದಿನ ಹೋರಾಟ ಕೊಡುತ್ತಿದ್ದಾರೆ.

Advertisement

ಇನ್ನೂ ಈ ಸೀಸನ್ ನಲ್ಲಿ ಗೆಳೆಯ-ಗೆಳತಿಯಂದೇ ಮಾತನಾಡುವ ಮಂಜು, ಗೌತಮಿ ಸ್ನೇಹ ಹೈಲೈಟ್ ಆಗಿತ್ತು. ಆದರೆ ಈ ವಾರ ಇವರಿಬ್ಬರ ಸ್ನೇಹದಲ್ಲಿ ಬಿರುಕು ಬಿಟ್ಟಿರುವ ಹಾಗೆ ಕಾಣುತ್ತಿದೆ.

ಬಿಗ್​ಬಾಸ್​ ಶುರುವಾದಾಗಿನಿಂದ ಈ ಇಬ್ಬರು ಇಲ್ಲಿಯವರೆಗೂ ಜೋಡಿಯಾಗೇ ಇದ್ದರು. ಆದರೆ ಏಕಾಏಕಿ ಈ ಇಬ್ಬರ ಮಧ್ಯೆ ಬಿರುಕು ಮೂಡಿದೆ. ಬಿಗ್​ಬಾಸ್ ಮನೆಯಲ್ಲಿ ಮಂಜು ಹಾಗೂ ಗೌತಮಿ ಜಾಧವ್​ ಗೆಳತನದ ಎಂತದ್ದು ಎಂದು ಎಲ್ಲರಿಗೂ ಗೊತ್ತೇ ಇದೆ. ಗೆಳತಿ ಗೆಳತಿ ಎನ್ನುತ್ತಲೇ ಗೌತಮಿಗೆ ಸಪೋರ್ಟ್​ ಮಾಡಿಕೊಂಡು ಬರುತ್ತಿದ್ದ ಮಂಜು ಸದ್ಯ ಶಾಕ್​ನಲ್ಲಿದ್ದಾರೆ. ಪ್ರತಿಯೊಂದು ವಿಚಾರಲ್ಲೂ ಗೆಳತಿ ಬಗ್ಗೆ ವಹಿಸಿಕೊಂಡು ಮಾತಾಡುತ್ತಿದ್ದ ಮಂಜು ಸದ್ಯ ಗೌತಮಿ ಖಡಕ್​ ಮಾತಿಗೆ ಕಕ್ಕಾಬಿಕ್ಕಿಯಾಗಿದ್ದಾರೆ.

ಪ್ರತಿ ವಿಚಾರಕ್ಕೂ ಮಂಜಣ್ಣ ಮೇಲೆ ಗೌತಮಿ ಕೋಪಗೊಳ್ಳುತ್ತಿದ್ದಾರೆ. ಕ್ಯಾಪ್ಟನ್​ ಪಟ್ಟ ಸಿಗುತ್ತಿದ್ದಂತೆ ಗೌತಮಿ ಬದಲಾಗಿ ಬಿಟ್ರಾ ಎಂಬ ಅನುಮಾನ ವಿಕ್ಷಕರಿಗೆ ಮೂಡಿತ್ತು. ಆದರೆ ಈಗ ಮತ್ತೆ ಗೌತಮಿ ನೀವು ನನ್ನ ಜೊತೆಗೆ ಇರಬೇಡಿ. ನೀವು ಇದ್ದರೆ ನಮಗೆ ಕಿರಿಕಿರಿ ಆಗುತ್ತೆ ಅಂತ ಹೇಳಿದ್ದಾರೆ.

ಈ ಮಾತನ್ನು ಕೇಳಿಸಿಕೊಂಡ ಮಂಜಣ್ಣ ಅಲ್ಲಿಂದ ಎದ್ದು ಹೇಗಿದ್ದಾರೆ. ಇದಾದ ಬಳಿಕ ಮತ್ತೆ ಗೌತಮಿ ಬಳಿ ಬಂದು ಗೆಳತಿ ಅಂತ ಮಾತಾಡಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಗೌತಮಿ ಆಟ ಚೇಂಚ್​ ಆಗುತ್ತಾ ಅಥವಾ ಮತ್ತೆ ಗೆಳೆಯ ಅಂತ ಮಂಜು ಅವರ ಹಿಂದೆ ಹೋಗುತ್ತಾರಾ ಅಂತ ಕಾದು ನೋಡಬೇಕಾಗಿದೆ.


Spread the love

LEAVE A REPLY

Please enter your comment!
Please enter your name here