ವಿಜಯಸಾಕ್ಷಿ ಸುದ್ದಿ, ಬೆಳಗಾವಿ: ಇಲ್ಲಿನ ನೇಸರಗಿ ಗ್ರಾಮದ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ 1989-90ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಗುರುವಂದನೆ ಮತ್ತು 4ನೇ ವರ್ಷದ ಸ್ನೇಹಕೂಟವನ್ನು ಆಯೋಜಿಸಿದ್ದರು.
ಕಾರ್ಯಕ್ರಮವನ್ನು ನೇಸರಗಿ ಮಲ್ಲಾಪೂರ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಹಿರಿಯ ನಿವೃತ್ತ ಶಿಕ್ಷಕರಾದ ಜಿ.ಆರ್. ಕುಲಕರ್ಣಿ, ಸಿವ್ಹಿ. ಕಟ್ಟಿಮನಿ, ವಿದ್ಯಾಮಂದಿರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಫಾ. ಹ್ಯಾರಿ ವಿಕ್ಟರ್ ದಿಕ್ರುಜ್ ಉದ್ಘಾಟಿಸಿದರು.
ನಿವೃತ್ತ ಶಿಕ್ಷಕ ಸಿ.ವ್ಹಿ. ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳು ಎಷ್ಟೇ ದೊಡ್ಡವರಾದರೂ ಶಿಕ್ಷಕರಿಗೆ ಕೊಡುವಷ್ಟು ಗೌರವ ಯಾರಿಗೂ ಕೊಡುವದಿಲ್ಲ. ನಿಮ್ಮ ಮಕ್ಕಳ ಮೂಲಕ ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಿ ಎಂದರು.
ವಿದ್ಯಾಮಂದಿರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಫಾ. ಹ್ಯಾರಿ ವಿಕ್ಟರ್ ದಿಕ್ರುಜ್ ಮಾತನಾಡಿ, ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕರನ್ನು ಗೌರವಿಸುತ್ತಿರುವುದು ಮತ್ತು ಈ ಶಾಲೆಯ ಮೇಲೆ ಇಟ್ಟಿರುವ ಅಭಿಮಾನವನ್ನು ಕಂಡು ಸಂತಸವಾಗಿದೆ ಎಂದರು.
ಸುರೇಶ ನಾವಲಗಟ್ಟಿ, ಮಲ್ಲೇಶ ಯರಗುದ್ದಿ, ಅಧ್ಯಕ್ಷತೆ ವಹಿಸಿದ್ದ ನೇಸರಗಿ ಮಲ್ಲಾಪೂರ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿದರು. ಕಾರ್ಯಕ್ರಮದ ಯಶಸ್ಸಿಯಾಗಿ ಶ್ರಮಿಸಿದ ಮಾರುತಿ ಓನವೆ, ವಿಠ್ಠಲ ಕಮತಗಿ, ಡಾ. ಬಾಬಾಸಾಹೇಬ ದೇಸಾಯಿ, ಸುರೇಶ ನಾವಲಗಟ್ಟಿ ಮತ್ತು ಉಷಾ ಕಟ್ಟಿಮನಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಎಸ್. ಅಪ್ಪಾಜಿಗೋಳ, ಎಸ್.ಎಮ್. ವನಹಳ್ಳಿ, ಎ.ಆರ್. ಕುಲಕರ್ಣಿ, ಎ.ಬಿ. ಉಪ್ಪಾರ, ಯರಗಟ್ಟಿ, ಪ್ರಭಾಕರ ಸತ್ತಿಗೇರಿ, ಹನಮಂತ ಹಳೇಮನಿ, ಮಲ್ಲೇಶ ಹುಲಮನಿ, ಯಲ್ಲನಗೌಡ ದೊಡ್ಡಗೌಡರ, ಸುನೀಲ ಕೊಳದೂರ, ಮಹಾಂತೇಶ ಮಾಸ್ತಮರ್ಡಿ, ವಿಜಯ ಸೋಮಣ್ಣವರ, ಮಹಾಂತೇಶ ಚರಂತಿಮಠ, ಶಿವನಗೌಡ ಪಾಟೀಲ, ಮಹಾವೀರ ಚನ್ನಣ್ಣವರ, ಸೋಮಶೇಖರ ಹೊಂಡಪ್ಪನವರ, ಮಹಾಂತೇಶ ಭದ್ರಿ, ಬಸವರಾಜ ಅಮಾತಿ, ವಿದ್ಯಾರ್ಥಿನಿಯರಾದ ವೀಣಾ ಕುಲಕರ್ಣಿ, ಸುರೇಖಾ ಮೇಟಿ, ಕಮಲಾ ನಾವಲಗಟ್ಟಿ, ದ್ರಾಕ್ಷಾಯಣಿ ಮರೆಯಪ್ಪಗೋಳ, ದೊಡ್ಡವ್ವ ಪಾಟೀಲ, ಶಶಿಕಲಾ ಹಣ್ಣಿಕೇರಿ, ಸುಮಾ ಹುದ್ದಾರ, ಸುವರ್ಣ ಯತ್ತಿನಮನಿ, ಸುಮಾ ಚೋಬಾರಿ, ಉಮಾ ಪುಗಟಿ, ಮಲ್ಲವ್ವ ಚಿಗರಿ, ಶಾಂತಾ ಒಡೆಯರ, ಬಸಮ್ಮ ಮಲ್ಲಾಪೂರ ಮುಂತಾದವರಿದ್ದರು.
ಸಂಜಯ ಸರಾಫ ಪ್ರಾರ್ಥಿಸಿದರು. ಎಂ.ಆರ್. ಬಾಗೇವಾಡಿ ಸ್ವಾಗತಿಸಿದರು. ಉಷಾ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು. ಮಹಾವೀರ ಬಿಲ್ ವಂದಿಸಿದರು.
ಹಿರಿಯ ನಿವೃತ್ತ ಶಿಕ್ಷಕ ಜಿ.ಆರ್. ಕುಲಕರ್ಣಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದ್ದು, ಶಿಕ್ಷಕರಿಗೆ ಸಿಗುವಷ್ಟು ಗೌರವ ಯಾರಿಗೂ ಸಿಗುವುದಿಲ್ಲ. ಶಿಕ್ಷಕರು ಸಹ ಯಾವ ವಿದ್ಯಾರ್ಥಿಯನ್ನೂ ದಡ್ಡ ಎಂದು ಭಾವಿಸಬಾರದು. ಅಂತಹ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ನೀಡುವಲ್ಲಿ ಪ್ರಯತ್ನಿಸಬೇಕೆಂದು ಹೇಳಿದರು.