Orange Peel Benefits: ಕಿತ್ತಳೆ ಸಿಪ್ಪೆ ಎಸೆಯಬೇಡಿ: ಇದರಲ್ಲಿದೆ ನಾನಾ ಆರೋಗ್ಯ ಪ್ರಯೋಜಗಳು

0
Spread the love

ಸಾಮಾನ್ಯ ವಾಗಿ ನಾವು ಕಿತ್ತಳೆ ಹಣ್ಣು ತಿನ್ನುವಾಗ ಒಳಗಿನ ತೊಳೆ ತಿನ್ನುತ್ತೇವೆ ಮತ್ತು ಮೇಲಿನ ಸಿಪ್ಪೆಯನ್ನು ಬಿಸಾಡುತ್ತೇವೆ. ಕಿತ್ತಳೆ ಹಣ್ಣಿನ ಸಿಪ್ಪೆ ಒಗರು ಅನುಭವ ನೀಡುತ್ತದೆ. ಹಾಗಾಗಿ ಇದನ್ನು ನಾವು ತಿನ್ನಲು ಬಯಸುವುದಿಲ್ಲ. ಆದರೆ ಇದರಲ್ಲಿ ಕಿತ್ತಳೆ ಹಣ್ಣಿನ ತೊಳೆಗಿಂತ ಹೆಚ್ಚಾದ ಪ್ರಯೋಜನಗಳು ಸಿಗುತ್ತವೆ.

Advertisement
  1. ನೈಸರ್ಗಿಕ ಬ್ಲೀಚ್‌ ಆಗಿ ಕಾರ್ಯನಿರ್ವಹಣೆ ಕಿತ್ತಳೆ ಹಣ್ಣಿನ ಸಿಪ್ಪೆಯು ನೈಸರ್ಗಿಕ ಬ್ಲೀಚ್ ಆಗಿ ಕಾರ್ಯ ನಿರ್ವಹಿಸಲಿದೆ, ಬಹುತೇಕ ವಿಟಮಿನ್‌ ಸಿ ಯುಕ್ತ ಹಣ್ಣುಗಳು ನೈಸರ್ಗಿಕವಾಗಿ ಬ್ಲೀಚಿಂಗ್‌ ಏಜೆಂಟ್‌ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇದು ಚರ್ಮದ ಮೇಲಿರುವ ಕಪ್ಪು ಕಲೆಗಳನ್ನು ಲೈಟನಿಂಗ್ ಮಾಡುತ್ತದೆ. ಕಿತ್ತಳೆ ಸಿಪ್ಪೆಯ ಪುಡಿಯು ಬಹಳಷ್ಟು ಉತ್ತಮ ಮೂಲವನ್ನು ಹೊಂದಿದ್ದು, ಚರ್ಮದ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸಲು ಉತ್ತೇಜಿಸುತ್ತದೆ.
  2. ನಿದ್ರೆಗೆ ಸಹಾಯ ಮಾಡುತ್ತದೆ : ಕಿತ್ತಳೆ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಈ ನೀರನ್ನು ಕುಡಿಯಿರಿ ಇದರಿಂದ ನಿದ್ರಾಹೀನತೆ ದೂರವಾಗುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ.
  3. ಮೊಡವೆ ಮತ್ತು ಕಲೆಯನ್ನು ದೂರ ಮಾಡುತ್ತದೆ ಕಿತ್ತಳೆ ಸಿಪ್ಪೆಯ ಪುಡಿಯು ವಿಟಮಿನ್‌ ಸಿಯಲ್ಲಿ ಹೇರಳವಾಗಿದ್ದು, ಇದು ಚರ್ಮದ ಕಾಲಜನ್‌ ಮತ್ತು ಎಲಾಸ್ಟಿನ್‌ ಅನ್ನು ರೂಪಿಸಲು ಉತ್ತೇಜಿಸುತ್ತದೆ. ಕಿತ್ತಳೆ ಸಿಪ್ಪೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ, ಇದು ನಿಮಗೆ ದೋಷರಹಿತ ಚರ್ಮವನ್ನು ನೀಡುತ್ತದೆ. ಅಲ್ಲದೆ, ಮೊಡವೆಗಳನ್ನು ರೂಪಿಸುವ ಬ್ಯಾಕ್ಟೀರಿಯಾಗಳ ಮೇಲೆ ಹೋರಾಡುತ್ತದೆ.
  4. ರೋಗನಿರೋಧಕ ಶಕ್ತಿ ಹೆಚ್ಚಳ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಆಂಟಿ ಇಂಫ್ಲಮೇಟರಿ ಗುಣವಿರುತ್ತದೆ. ಕಿತ್ತಳೆ ಸಿಪ್ಪೆಯು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಕಿತ್ತಳೆ ಸಿಪ್ಪೆಯನ್ನು ಸಕ್ಕರೆ ಮತ್ತು ನಿಂಬೆಯೊಂದಿಗೆ ತಿನ್ನಬಹುದು.
  5. ಹೇರ್ ಕಂಡಿಷನರ್ ಆಗಿ ಬಳಕೆ ಈ ಹಣ್ಣಿನ ಸಿಪ್ಪೆಯಲ್ಲಿ ಕೂದಲಿಗೆ ಪ್ರಯೋಜನಕಾರಿಯಾದ ಕ್ಲೆನ್ಸಿಂಗ್ ಗುಣಗಳು ಇರುತ್ತವೆ. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ, ನಂತರ ಅದರಲ್ಲಿ ಜೇನು ತುಪ್ಪವನ್ನು ಬೆರೆಸಿ ತಲೆ ಕೂದಲಿಗೆ ಹಚ್ಚಿಕೊಳ್ಳಿ.
  6. ಕೂದಲು ಹೊಟ್ಟಿನಿಂದ ಮುಕ್ತಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿಯನ್ನು ತಯಾರಿಸಿ ನಂತರ ಅದರಲ್ಲಿ ತೆಂಗಿನ ಎಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ದೂರವಾಗುತ್ತದೆ.

 


Spread the love

LEAVE A REPLY

Please enter your comment!
Please enter your name here