ಬೆಡ್‌ ಮೇಲೆ ಕೊಳೆ ಬಟ್ಟೆ ಬಿಸಾಕುವ ಗಂಡ ಬೇಡ: ಪತಿಗೆ ಡಿವೋರ್ಸ್‌ ನೀಡಿದ ಹೆಂಡತಿ!

0
Spread the love

ಪದೇ ಪದೇ ಕೊಳೆ ಬಟ್ಟೆಯನ್ನು ಬೆಡ್‌ ಮೇಲೆ ತಂದು ಬಿಸಾಕುವ ಪತಿರಾಯನ ಈ ಒಂದು ಅಭ್ಯಾಸದಿಂದ ಬೇಸತ್ತ ಪತ್ನಿ ಆತನಿಗೆ ಡಿವೋರ್ಸ್‌ ನೀಡಲು ಮುಂದಾಗಿದ್ದಾರೆ.

Advertisement

ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸ್ವತಃ ಆ ಮಹಿಳೆಯೇ ನನ್ನ ಗಂಡನ ಈ ಒಂದು ಅಭ್ಯಾಸವನ್ನು ಸಹಿಸಲಾರದೆ ಆತನಿಗೆ ನಾನು ಡಿವೋರ್ಸ್‌ ನೀಡಿದರೂ ನೀಡಬಹುದು ಎಂದು ಹೇಳಿದ್ದಾರೆ. ಆ ಮಹಿಳೆ ತನ್ನ ಪತಿಯನ್ನು ತುಂಬಾ ಪ್ರೀತಿ ಮಾಡ್ತಿದ್ರೂ ಕೂಡಾ ಆಕೆ ಡಿವೋರ್ಸ್‌ ನೀಡಲು ಮುಂದಾಗಿದ್ದಾಳೆ. ಆಕೆಯ ಪತಿ ಚೆಫ್‌ ಆಗಿದ್ದು, ಕೆಲಸದಿಂದ ಬಂದ ಕೂಡಲೇ ಆಹಾರದ ಕಲೆ, ಗ್ರೀಸ್‌ ಕಲೆಗಳಿಂದ ತುಂಬಿದ ಕೊಳೆ ಬಟ್ಟೆಯನ್ನು ಆತ ಬೆಡ್‌ ಮೇಲೆಯೇ ತಂದು ಬಿಸಾಡುತ್ತಿದ್ದ. ನನಗೆ ಪದೇ ಪದೇ ಬೆಡ್‌ಶೀಟ್‌ ಚೇಂಜ್‌ ಮಾಡಿ ಸಾಕಾಕಿದೆ. ಅಷ್ಟೇ ಅಲ್ಲದೇ ಈ ಕೆಟ್ಟ ಅಭ್ಯಾಸವನ್ನು ಬಿಟ್ಟು ಬಿಡಿ ಎಂದು ಹೇಳಿದರೂ ಕೇಳುತ್ತಿಲ್ಲ. ಗಂಡನ ಈ ನಡವಳಿಕೆಯನ್ನು ಸಹಿಸಲಾರದೆ ನಾನು ಆತನಿಗೆ ಡಿವೋರ್ಸ್‌ ನೀಡಬಹುದು ಎಂದು ಆಕೆ ಹೇಳಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here