ಹಾಸನ: ಸರ್ಕಾರ ಸ್ಕ್ಯಾಂಡಲ್‌ಗಳಲ್ಲಿ ಸಿಲುಕಿಕೊಂಡಿದೆ. ಅದರಿಂದ ಹೊರಬರಲು ಅವರಿಗೆ ಆಗ್ತಿಲ್ಲ, ಅದಕ್ಕೆ ಅದರಲ್ಲಿ ಬ್ಯುಸಿ ಇದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಮಲೆನಾಡು ಭಾಗದಲ್ಲಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸ್ಕ್ಯಾಂಡಲ್‌ಗಳಲ್ಲಿ ಸಿಲುಕಿಕೊಂಡಿದೆ. ಅದರಿಂದ ಹೊರಬರಲು ಅವರಿಗೆ ಆಗ್ತಿಲ್ಲ, ಅದಕ್ಕೆ ಅದರಲ್ಲಿ ಬ್ಯುಸಿ ಇದ್ದಾರೆ.
ನಾನು ಕಂದಾಯ ಸಚಿವನಾಗಿ ಮಳೆಹಾನಿಗೆ ತುರ್ತು ಪರಿಹಾರ ನೀಡಿದ್ದೆ. ಇಲ್ಲಿ ಪರಿಹಾರ ಕೊಡಲು ಇನ್ನೂ ಶುರು ಮಾಡಿಲ್ಲ. ಕೇಂದ್ರ ಸರ್ಕಾರ ಕೊಟ್ಟಿರುವ ಹಣವನ್ನು ಇವರು ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟಿರುವುದನ್ನು ನೀಡಿ ಕೈಚೆಲ್ಲಿ ಕೂರಬಾರದು. ರಾಜ್ಯ ಸರ್ಕಾರ ಅದಕ್ಕೆ ಹೆಚ್ಚಿನ ಹಣ ಹಾಕಿ ಪರಿಹಾರ ನೀಡಬೇಕು. ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ. ಸರ್ಕಾರ ಪಾಪರ್ ಆಗಿದೆ, ಕಳೆದ ಆರೇಳು ತಿಂಗಳಿನಿಂದ ಅದೇ ಸ್ಥಿತಿಯಲ್ಲಿದೆ. ಈಗ ಗ್ಯಾರೆಂಟಿಗಾಗಿ ಟ್ಯಾಕ್ಸ್ ಹಾಕುತ್ತಿದ್ದಾರೆ. ದಲಿತರ ಹಣ ಉಪಯೋಗಿಸಿಕೊಂಡಿದ್ದಾರೆ. ಸರ್ಕಾರದ ಬಳಿ ಹಣ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.