ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡಬಲ್ ಮರ್ಡರ್ ಆಗಿದೆ. ಸಿಂಗಹಳ್ಳಿ ಗ್ರಾಮದ ಹೊರವಲಯದ ಶೆಡ್ ನಲ್ಲಿ ಖಾಸಗಿ ಬಸ್ನ ಇಬ್ಬರು ಸಿಬ್ಬಂದಿಯ ಕೊಲೆಯಾಗಿದೆ. ನಾಗೇಶ್, ಮಂಜೇಗೌಡ ಮೃತ ವ್ಯಕ್ತಿಗಳಾಗಿದ್ದು, ಖಾಸಗಿ ಬಸ್ನ ಕ್ಲೀನರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.
Advertisement
ರಾತ್ರಿ ಕುಡಿದ ಅಮಲಿನಲ್ಲಿ ಹೊಡೆದಾಡಿಕೊಂಡ ಪರಿಣಾಮ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗನಗಳ್ಳಿ ಶೆಡ್ನಲ್ಲಿ ಒಟ್ಟಿಗೆ ಡಬಲ್ ಮರ್ಡರ್ಗಳಾಗಿವೆ. ಆದರೆ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.