ಚಿಕ್ಕಮಗಳೂರು: ಇತ್ತಿಚಿಗೆಯಷ್ಟೆ ಮಧುಗಿರಿ DYSP ರಾಮಚಂದ್ರಪ್ಪ ಅವರ ರಾಸಲೀಲೆ ವಿಡಿಯೋ ಲೀಕ್ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಮತ್ತೊಬ್ಬ ಪೊಲೀಸ್ ಅಧಿಕಾರಿ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.
ಹೌದು ಕಳಸ ಪಿ.ಎಸ್.ಐ. ನಿತ್ಯಾನಂದಗೌಡ ವಿರುದ್ದ ಆತನ ಪತ್ನಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು, ಕಳಸ ಠಾಣೆಯಲ್ಲೇ ದೂರು ನೀಡಿದ್ದಾರೆ. ಪಿ.ಎಸ್.ಐ. ಪತ್ನಿ ಅಮಿತಾ ತಮ್ಮ ಪತಿ ನಿತ್ಯಾನಂದಗೌಡ 50 ಲಕ್ಷ ಹಣ ಕೇಳಿದ್ದಾರೆ. ಅಲ್ಲದೇ ನಿತ್ಯಾನಂದಗೌಡ, ತಂಗಿ, ತಂಗಿಯ ಗಂಡನಿಂದಲೂ ಹಲ್ಲೆ, ಅವಾಚ್ಯ ಶಬ್ಧಗಳ ಬಳಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೂ ಪಿಎಸ್‌ಐ ನಿತ್ಯಾನಂದಗೌಡ ಕೆಲಸ ಮಾಡಿರುವ ಠಾಣೆಗಳಲ್ಲೂ ಕೂಡ ಆತನ ವೈಯಕ್ತಿಕ ಜೀವನದ ಬಗ್ಗೆ ಕೆಟ್ಟ ಅಭಿಪ್ರಾಯಗಳಿವೆ. ಕಷ್ಟ ಅಂತ ಬರುವ ಹಾಗೂ ಪಾಸ್ ಪೋರ್ಟ್ ಗೆ ಬರುವ ಮಹಿಳೆಯರ ಬಳಿ ಅನುಚಿತ ವರ್ತನೆ ತೋರಿದ್ದ ಎಂದು ಆತನ ಪತ್ನಿ ಅಮಿತಾ ಆರೋಪಿಸಿದ್ದಾರೆ.
ಅಲ್ಲದೇ ಉಡುಪಿಯ ಕಾಪು ಠಾಣೆಯಲ್ಲಿದ್ದಾಗ ಮುಸ್ಲಿಂ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ, ನಾನು ಆತನ ರೂಮ್ ಗೆ ಹೋದಾಗ ಕಾಂಡೋಮ್ ಗಳು ಪತ್ತೆಯಾಗಿದ್ದವು, ವಿಷಯ ಗೊತ್ತಾಗಿ ಮುಸ್ಲಿಮರು ಪಿ.ಎಸ್.ಐ. ಗೆ ಹೊಡೆಯಲು ಬಂದಾಗ ಅಂದಿನ ಎಸ್ಪಿ ಅವರು ಉಳಿಸಿದ್ದರು. ಕೋಟಾ ಠಾಣೆಯಲ್ಲಿ ಮಹಿಳೆ ನ್ಯಾಯ ಕೊಡಿಸುತ್ತೇನೆ ಎಂದು ದೈಹಿಕವಾಗಿ ಬಳಸಿಕೊಂಡಿದ್ದಾನೆ.
ಬೆಂಗಳೂರಿನಲ್ಲೂ ಒಬ್ಬ ಮಹಿಳೆಯ ಜೊತೆಗೆ ಅನುಚಿತ ವರ್ತನೆ ತೋರಿದ್ದ. ಆದರೆ ಆಮೇಲೆ ಮಹಿಳೆಗೆ 4 ಲಕ್ಷ ಹಣ ಕೊಟ್ಟು ಬಚಾವ್ ಆಗಿದ್ದಾನೆ ಎಂದು ತನ್ನ ಪತಿಯ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.
ಸದ್ಯ ಪಿಎಸ್‌ಐ ನಿತ್ಯಾನಂದಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆ ಯಾವ ರೀತಿ ನಡೆಯುತ್ತದೆ ಎಂದು ಕಾದು ನೋಡಬೇಕಿದೆ.