ತುಮಕೂರು: ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ಬರುವ ಕಾಮಗಾರಿಯ ಡಿಪಿಆರ್ ನಡೀತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ಬಹಳ ವೇಗವಾಗಿ ಬೆಳೆಯಲಿ. ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ಬರುವ ಕಾಮಗಾರಿಯ ಡಿಪಿಆರ್ ನಡೀತಿದೆ ಎಂದರು.
ಅಲ್ಲದೇ ತುಮಕೂರು, ಬೆಂಗಳೂರಿನಿಂದ ಕೇವಲ 65 ಕಿಮಿ ದೂರದಲ್ಲಿದೆ. ಹಾಗಾಗಿ ತುಮಕೂರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು. ರಾಜ್ಯದ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಇಲ್ಲಿಗೆ ಕೊಡಬೇಕು ಎಂದು ಸಿಎಂ, ಡಿಸಿಎಂಗೆ ವೇದಿಕೆಯಲ್ಲೇ ಮನವಿ ಮಾಡಿದರು.
ಇನ್ನೂ ಈಗಾಗಲೇ ಏಷ್ಯಾ ಖಂಡದಲ್ಲೇ ದೊಡ್ಡ ಕೈಗಾರಿಕಾ ಘಟಕ ಸ್ಥಾಪನೆಗೆ ಕ್ರಮ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಲಾಗಿದೆ. ಈ ಮೂಲಕ ತುಮಕೂರು ವಿಶ್ವದ ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ.
ತುಮಕೂರು ಜಿಲ್ಲೆಗೆ ಕಾಯಕಲ್ಪ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಹಕಾರ ನೀಡುತ್ತಿದೆ. 2023 ರಲ್ಲಿ ಈ ರಾಜ್ಯದ ಜನತೆಗೆ 5 ಗ್ಯಾರಂಟಿ ಭರವಸೆ ಕೊಟ್ಟಿದ್ದೆವು. ಆ ಐದು ಗ್ಯಾರಂಟಿ ಪರಿಪೂರ್ಣವಾಗಿ ಜಾರಿ ಮಾಡಿದ್ದು ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ. ಆದರೆ 10 ಕೆಜಿ ಅಕ್ಕಿ ಕೊಡಲು ಆಗಿಲ್ಲ, ಬದಲಾಗಿ ದುಡ್ಡು ಕೊಟ್ಟಿದ್ದೇವೆ ಎಂದು ಹೇಳಿದರು.