ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಈ ನಾಡು ಕಂಡ ಶ್ರೇಷ್ಠ ವ್ಯಕ್ತಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆಯ ನಿಮಿತ್ತ ದಲಿತ ಸಂಘರ್ಷ ಸಮಿತಿ, ಸಮಾನಮನಸ್ಕ ಬಳಗ, ಬಂಡಾಯ ಬಳಗ, ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಸಹಕಾರದೊಂದಿಗೆ ಶನಿವಾರ ರಾತ್ರಿ ಪಂಜಿನ ಮೆರವಣಿಗೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದ ಕಾರ್ಯಕರ್ತರು, ನಂತರ ಸಭೆ ನಡೆಸಿದರು. ಈ ವೇಳೆ ದಲಿತ ಮುಖಂಡರಾದ ಹನುಮಂತಪ್ಪ ನಂದೆಣ್ಣವರ, ಸುರೇಶ್ ನಂದೆಣ್ಣವರ, ಸೋಮಣ್ಣ ಯತ್ತಿನಹಳ್ಳಿ, ಬಸವಣ್ಣೆಪ್ಪ ನಂದೆಣ್ಣವರ ಮಾತನಾಡಿ, ಅಂಬೇಡ್ಕರ್ ವ್ಯಕ್ತಿಯಲ್ಲ, ಅವರೊಬ್ಬ ಅದ್ಭುತವಾದ ಶಕ್ತಿಯಾಗಿದ್ದಾರೆ. ಅವರು ರಚಿಸಿದ ಸಂವಿಧಾನವೇ ನಮಗೆಲ್ಲ ಶ್ರೀರಕ್ಷೆಯಾಗಿದೆ. ಜಗತ್ತಿನಲ್ಲಿಯೇ ವಿಶೇಷವಾದ ಸಂವಿಧಾನ ನಮ್ಮ ದೇಶದ್ದು ಎನ್ನುವ ಹೆಮ್ಮೆ ಪ್ರತಿಯೊಬ್ಬ ಭಾರತೀಯರಿಗಿದೆ. ಅವರ ಚಿಂತನೆ, ಸಮಾಜ ಪರಿವರ್ತನೆ ಮತ್ತು ಸಂವಿಧಾನದ ಮೌಲ್ಯಗಳ ಕುರಿತು ಅವರು ನೀಡಿದ ಸಂದೇಶಗಳೇ ಜೀವನದ ಏಳು-ಬೀಳುಗಳ ಬುನಾದಿಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ರಾಮಪ್ಪ ಗಡದವರ್, ರಮೇಶ್ ಅಡುಗಿಮನಿ, ಫಕೀರೇಶ ಭಜಕ್ಕನವರ್, ಫಕೀರೇಶ ನಂದೆಣ್ಣವರ್, ಹೊನ್ನಪ್ಪ ಸಂಜೀವಣ್ಣವರ್, ಮೋಹನ ನಂದೆಣ್ಣವರ, ದೇವಪ್ಪ ನಂದೆಣ್ಣವರ, ಸದಾನಂದ ನಂದೆಣ್ಣವರ್, ನಾಗಪ್ಪ ನಂದೆಣ್ಣವರ, ಮಹಾದೇವಪ್ಪ ಹಾದಿಮನಿ, ಮಹಾಂತೇಶ್ ಗುಡಸಲಮನಿ, ಹನುಮಂತಪ್ಪ ಹರಿಜನ, ಗುಡ್ಡಪ್ಪ ಮತ್ತೂರ, ಮಾತ್ರಾಂಡಪ್ಪ ಗಾಳೆಪ್ಪನವರ, ಮಹಾಂತೇಶ್ ಮುಶೆಪ್ಪನವರ, ಶೇಖರ ಹಂಜಗಿ, ಸತೀಶ್ ನಾರಾಯಣ್ಕರ, ದೇವರಾಜ್ ನಡವಲಕೇರಿ, ಅನಿಲ್ ಮುಳಗುಂದ, ನಾಗೇಶ್ ಅಮರಾಪುರ, ಬಸವರಾಜ ನಂದೆಣ್ಣವರ, ಮಂಜುನಾಥ ಗಡದವರ, ಪ್ರಮೋದ ಕರಾಟೆ ಮುಂತಾದವರಿದ್ದರು.



