HomeGadag Newsಡಾ. ಸಿದ್ದಗಂಗಪ್ಪರ ಕೃತಿಗೆ ಪ್ರಶಸ್ತಿ

ಡಾ. ಸಿದ್ದಗಂಗಪ್ಪರ ಕೃತಿಗೆ ಪ್ರಶಸ್ತಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬೆಂಗಳೂರಿನ ಡಾ. ಎಚ್.ಎಸ್. ಸಿದ್ದಗಂಗಪ್ಪ ಇವರ `ಕರ್ನಾಟಕದ ಸಾಧನೆ ಸಂಪನ್ನರು’ ಸಾಹಿತ್ಯ ಕೃತಿಯು ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪ್ರಶಸ್ತಿಯು 5 ರಾವಿರ ರೂ. ನಗದು ಬಹುಮಾನ, ಸನ್ಮಾನಪತ್ರ, ನೆನಪಿನ ಕಾಣಿಕೆಗಳನ್ನು ಒಳಗೊಂಡಿರುತ್ತದೆ.
ಅಕ್ಟೋಬರ್ 20ರಂದು ಸೇವಾ ಸಮಿತಿಯು ಹಮ್ಮಿಕೊಳ್ಳುವ ಪಂ. ಪುಟ್ಟರಾಜ ಸಾಹಿತ್ಯೋತ್ಸವ-2024 ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ಪ್ರಶಸ್ತಿಗಾಗಿ ಬಂದ 130ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳಲ್ಲಿ ಪ್ರಥಮ ಸ್ಥಾನ ಪಡೆದ ಕೃತಿಗಳಾದ ಹುಬ್ಬಳ್ಳಿಯ ಪದ್ಮಜಾ ಜಯತೀರ್ಥ ಉಮರ್ಜಿ ಇವರ-ಬೃಂಗದ ಬೆನ್ನೇರಿ (ಕಥಾ ಸಂಕಲನ), ಬಾದಾಮಿಯ ಸುರೇಶ್ ಅರಳಿಮರದರವರ-ಹೀಗೇ ಒಂದಿಷ್ಟು (ಕವನ ಸಂಕಲನ) ಧಾರವಾಡದ ಡಾ. ಈರಣ್ಣ ಇಂಜಗನೇರಿ ಇವರ-ಫ್ರೀಡಮ್ (ಕಾದಂಬರಿ) ಕೊಪ್ಪಳ ಜಿಲ್ಲೆಯ ಬೈರಾಪುರದ ಎಲ್ಲಪ್ಪ ಮ. ಹರ್ನಾಳಗಿ ಇವರ-ತಿರುವು (ಲೇಖನಗಳ ಸಂಗ್ರಹ), ಧಾರವಾಡದ ಸರಸ್ವತಿ ರಾ ಭೋಸಲೆ ಇವರ-ಮೂರನೇ ಕಾಲು (ಮಕ್ಕಳ ಕಥೆಗಳು), ಧಾರವಾಡದ ಡಾ. ವೀಣಾ ಸಂಕನ ಗೌಡರ್ ಅವರ-ಮೂರು ಮತ್ತೊಂದು ನಾಟಕಗಳು, ಬೆಳಗಾವಿಯ ಡಾ. ಪಿ. ನಾಗರಾಜ್ ಅವರ ವಚನ ನಿರ್ವಚನ, ಶಿವಪುತ್ರ ಕಂಠಿ ಚಿಂಚನಸೂರ ಇವರ-ಸಾಧನೆಯ ಶಿಖರವನ್ನು ಏರಿದ ಶಿವಶರಣರು, ಬೀದರಿನ ಪೂಜ್ಯಶ್ರೀ ಜಗದ್ಗುರು ಶಿವಯೋಗಿಶ್ವರ ಸ್ವಾಮಿಗಳ-ಆತ್ಮಾನುಭವದ ಬುತ್ತಿ, ಡಾ. ಅಂಬುಜ ಎನ್ ಮಳಖೇಡಕರ್-ಮನ ಹರಿ ಧ್ಯಾನ ಮಂದಿರ ಭಕ್ತಿಗೀತೆಗಳು ಕೃತಿಗಳಿಗೆ ಸೇವಾ ಸಮಿತಿಯ ವರ್ಷದ ಶ್ರೇಷ್ಠ ಕೃತಿ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ವಿನುತ ಹಂಚಿನಮನಿ ಇವರ ನಾತಿಚರಾಮಿ, ರೂಪಾ ದೇವಿ ಬಂಗಾರ ಮುಡಿಪು, ಮಹಾಂತೇಶ್ ಕುಂಬಾರ ಇವರ ಕುಲಮಿಯೊಳಗಿನ ಕವಿತೆಗಳು, ಎ.ಆರ್. ಪಂಪಣ್ಣ ಶೂನ್ಯದಿಂದತ್ತತ್ತ, ಮಾಲತೇಶ ಅಂಗೂರು ಕಾಡು ಮೇಡು, ಮತ್ತು ಪುಟ್ಟೇ ಸೋನುವಿನ ತರಲೆ ಕಥೆಗಳು ಕೃತಿಗಳು ತೀರ್ಪೂಗಾರರ ಮೆಚ್ಚಿನ ಕೃತಿ ಅಭಿನಂದನಾ ಪ್ರಶಸ್ತಿಗೆ ಆಯ್ಕೆ ಆಗಿವೆ.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!