ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಕನಕದಾಸ ಶಿಕ್ಷಣ ಸಮಿತಿಯ ಅಡಿಯಲ್ಲಿ ಡಾ. ಬಿ.ಎಫ್. ದಂಡಿನ ಕಾನೂನು ಪದವಿ ಮಹಾವಿದ್ಯಾಲಯ ಪ್ರಾರಂಭಗೊಂಡಿದ್ದು, ಈ ಕಾನೂನು ಮಹಾವಿದ್ಯಾಲಯ ಕರ್ನಾಟಕ ಸರ್ಕಾರ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಧಾರವಾಡದಿಂದ ಮಾನ್ಯತೆ ಪಡೆದಿದೆ.
ಕನಕದಾಸ ಶಿಕ್ಷಣ ಸಮಿತಿ ಈಗಾಗಲೇ ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ಕಾನೂನು ಪದವಿ ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರವೇಶ ಪಡೆದು ಕಾನೂನು ಪದವಿ ಪಡೆಯಲು ಉತ್ತಮ ಅವಕಾಶವಿದೆ. ಸದರಿ ಕಾನೂನು ಮಹಾವಿದ್ಯಾಲಯದಲ್ಲಿ ಪರಿಣಿತ ಪ್ರಾಧ್ಯಾಪಕರು ಹಾಗೂ ಸುಸಜ್ಜಿತ ಮೂಲಸೌಕರ್ಯಗಳನ್ನು ಮತ್ತು ಗ್ರಂಥಾಲಯವನ್ನು ಹೊಂದಿದೆ.
ಆಸಕ್ತ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಮಾಹಿತಿ ಪಡೆದು ಪ್ರವೇಶಕ್ಕಾಗಿ ಸಂಪರ್ಕಿಸಬಹುದಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.



