ಗದಗ: ಗದಗ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಡಾ. ಬಸವರಾಜ ಬಳ್ಳಾರಿ ಅವರು ರಾಜ್ಯ ಸರಕಾರಿ ನೌಕರ ಸಂಘದ ಗದಗ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಅಭಿನವ ಸೇವಾ ಸಮಿತಿಯ ವತಿಯಿಂದ ಅಭಿನವ ಆಂಜನೇಯ ದೇವಸ್ಥಾನದ ಆವರಣದಲ್ಲಿ ಡಾ. ಪುಷ್ಪಾ-ಡಾ. ಬಸವರಾಜ ಬಳ್ಳಾರಿ ದಂಪತಿಗಳನ್ನು ಸನ್ಮಾನಿಸಿ, ಅಭಿನಂಧಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಸವರಾಜ ಕಿರಟಗೇರಿ, ಉಪಾಧ್ಯಕ್ಷ ಎ.ಎಂ. ಅಂಗಡಿ, ವಿನೋದ, ಗಂಗಾಧರ ತಳವಾರ, ಡಾ. ವಿಶ್ವನಾಥ ವಿರಕ್ತಮಠ, ಸುಭಾಷ ಮಳಗಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಇದ್ದರು.
Advertisement