ವಿಜಯಸಾಕ್ಷಿ ಸುದ್ದಿ, ನರಗುಂದ: ತಾಲೂಕಿನ ಶಿರೋಳ ಗ್ರಾಮದಲ್ಲಿ ಆರ್ಥಿಕ ತಜ್ಞ, ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್ ಅವರಿಗೆ ಗ್ರಾಮಸ್ಥರಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ದ್ಯಾಮಣ್ಣ ಕಾಡಪ್ಪನವರ ಮಾತನಾಡಿ, ದೇಶಕ್ಕೆ ಮನಮೋಹನ್ ಸಿಂಗ್ ಅವರ ಕೊಡುಗೆ ಅನನ್ಯವಾದುದು. ಸುದೀರ್ಘ ೧೦ ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ, ದೇಶದ ವಿತ್ತ ಸಚಿವರಾಗಿ, ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದರು.
ಗ್ರಾ.ಪA ಸದಸ್ಯ ಈಶ್ವರಗೌಡ ತಿರಕನಗೌಡ್ರ ಮಾತನಾಡಿ, ಡಾ. ಸಿಂಗ್ ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟçಗಳಿಗೆ ಆರ್ಥಿಕ ಸಲಹೆ ನೀಡಿದ ಆರ್ಥಿಕ ತಜ್ಞರಾಗಿದ್ದಾರೆ. ದೇಶ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದಾಗ ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವಲ್ಲಿ ಮನಮೋಹನ್ ಸಿಂಗ್‌ರ ಪಾತ್ರ ಅಪಾರವಾದುದು ಎಂದರು.
ಈ ಸಂದರ್ಭದಲ್ಲಿ ಈರಪ್ಪ ಕರ್ಕಿಕಟ್ಟಿ, ಬಸಯ್ಯ ಮಠದ, ಗಂಗಪ್ಪ ಕೊಣ್ಣೂರ, ಶಂಕ್ರಪ್ಪ ಮುಚ್ಚಗಂಡಿ, ಉಮೇಶ ಶಾಂತಗೇರಿ, ಶಿವಪ್ಪ ಕುರಿ, ಶ್ಯಾಮು ಕಲಾಲ್, ದ್ಯಾಮಣ್ಣ ಮುಷ್ಟಿಗೇರಿ, ಜ್ಞಾನೇಶ ಪಾರ್ಗೆ, ಮಾರುತಿ ಕುರಿ, ಬೀರಪ್ಪ ಕುರಿ, ಗುರುಬಸಯ್ಯ ನಾಗಲೋಟಿಮಠ, ಬಸವರಾಜ ಚವಡಿ, ಯಮನಪ್ಪ ಹಿರೇಮನಿ, ದಾದಾಫೀರ ಖಲಿಫ್, ರಾಜೇಸಾಬ ಚಳ್ಳಮರದ, ಅಕ್ಷಯ ಗಡೆಕಾರ, ಮುತ್ತಪ್ಪ ಜಂಗಿನ, ಮಂಜುನಾಥ ಬಡಿಗೇರ ಸೇರಿದಂತೆ ಗ್ರಾಮಸ್ಥರು ಇದ್ದರು.