ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ೧೦ ವರ್ಷಗಳ ಕಾಲ ಪ್ರಧಾನಿಯಾಗಿ ಡಾ. ಮನಮೋಹನ್ ಸಿಂಗ್ ಅವರು ದೀನ ದಲಿತರ, ರೈತರ ಹಾಗೂ ಸರ್ವ ಸಮುದಾಯಗಳ ಏಳಿಗೆಗಾಗಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದು ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ ಹೇಳಿದರು.
ಅವರು ಶುಕ್ರವಾರ ಶಿರಹಟ್ಟಿಯ ಶ್ರೀ ಬಸವೇಶ್ವರ ವೃತ್ತದಲ್ಲಿ ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿ, ಅವುಗಳನ್ನು ಅನುಷ್ಠಾನಕ್ಕೆ ತಂದು ದೇಶವು ಅಭಿವೃದ್ಧಿ ಪಥದತ್ತ ಸಾಗುವಂತೆ ದೃಷ್ಟಿ ಹರಿಸಿದ್ದರು. ಇಂತಹ ಮಹಾನ್ ಚೇತನವನ್ನು ಕಳೆದುಕೊಂಡು ಕಾಂಗ್ರೆಸ್ ಪಕ್ಷ ಬಡವಾಗಿದೆ. ಇಂತಹ ಮಹಾನ್ ಚೇತನ ಮತ್ತೆ ಹುಟ್ಟಿ ಬರಲಿ ಎಂದು ಹೇಳಿದರು.
ಡಿಕೆ ಶಿವಕುಮಾರ ಅಭಿಮಾನಿ ಬಳಗದ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ ದಶಮನಿ, ಅಜ್ಜು ಪಾಟೀಲ, ಹೊನ್ನಪ್ಪ ಶಿರಹಟ್ಟಿ, ದೇವಪ್ಪ ಲಮಾಣಿ, ಇಸಾಕ ಆದ್ರಳ್ಳಿ, ರವಿ ಗುಡಿಮನಿ, ಮುಸ್ತಾಕ ಚೋರಗಸ್ತಿ, ಬುಡನಶ್ಯಾ ಮಕಾನದಾರ, ಮಾಬುಸಾಬ ಲಕ್ಮೇಶ್ವರ, ಸುಧೀರ ಜಮಖಂಡಿ, ಆನಂದ ಕೋಳಿ, ಈರಣ್ಣ ಕೋಟಿ, ನಾಗರಾಜ ಡಂಬಳ, ಆಯುಬ್ ಮನಿಯಾರ ಮುಂತಾದವರು ಉಪಸ್ಥಿತರಿದ್ದರು.