HomeGadag Newsಡಾ. ಮುಖರ್ಜಿಯವರ ಬಲಿದಾನ ದಿನ ಆಚರಣೆ

ಡಾ. ಮುಖರ್ಜಿಯವರ ಬಲಿದಾನ ದಿನ ಆಚರಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಹಾಗೂ ಗದಗ ನಗರ ಮಂಡಲ ವತಿಯಿಂದ ಪಕ್ಷದ ಸಂಸ್ಥಾಪಕರು, ಹಿರಿಯರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಬಲಿದಾನ ದಿನವನ್ನು ಆಚರಿಸಲಾಯಿತು.
ಪಕ್ಷದ ಹಿರಿಯರಾದ ಜಗನ್ನಾಥಸಾ ಭಾಂಡಗೆ ಮಾತನಾಡಿ, ಮುಖರ್ಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲ ಕಾರ್ಯಕರ್ತರು ಪಕ್ಷವನ್ನ ಸಂಘಟಿಸುವತ್ತ ಗಮನಹರಿಸಬೇಕೆಂದು ಹೇಳಿದರು.
ಎಂ.ಎಸ್. ಕರಿಗೌಡ್ರ ಮಾತನಾಡಿ, ಅಂದಿನ ಪಕ್ಷ ಬಲವರ್ಧನೆಯ ಕಾರ್ಯ ಹಾಗೂ ಇಂದಿನ ಬಿಜೆಪಿಯ ಬಲವರ್ಧನೆಯ ಕಾರ್ಯಕ್ಕೆ ಬಹಳಷ್ಟು ಕಾರ್ಯದ ಚಟುವಟಿಕೆಗಳು ವಿಭಿನ್ನವಾಗಿದ್ದು, ಅಂದು 2 ಲೋಕಸಭಾ ಸದಸ್ಯರಿದ್ದ ಪಕ್ಷವನ್ನು ಇಂದು 303ರ ಸ್ಥಾನಕ್ಕೆ ತಂದು ಪಕ್ಷವನ್ನ ಅಧಿಕಾರಕ್ಕೆ ಬರುವ ಹಾಗೆ ಮಾಡಿರುವ ಮುಖರ್ಜಿಯವರ ಬಲಿದಾನವನ್ನು ನಾವು ನೆನೆಯಬೇಕಿದೆ ಎಂದರು.
ಗದಗ ಜಿಲ್ಲಾ ಅಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಪಕ್ಷದ ಸಂಘಟನೆಯನ್ನು ಮುಖರ್ಜಿಯವರ ಮಾರ್ಗದರ್ಶನ, ಅವರ ತತ್ವಾದರ್ಶ ಮತ್ತು ಪಕ್ಷ ಬೆಳೆದುಬಂದ ಹಾದಿಯನ್ನು ಎಲ್ಲ ಬಿಜೆಪಿಯ ಕಾರ್ಯಕರ್ತರು ಅರಿಯಬೇಕು. ನಮ್ಮ ಹಿರಿಯರು ಯಾವುದೇ ಆಶೆ, ಆಕಾಂಕ್ಷೆಗಳಿಲ್ಲದೆ ಪಕ್ಷವನ್ನು ಬೆಳೆಸಿದ್ದಾರೆ.  ಪಕ್ಷದ ಮುಂದಿನ ಬೆಳವಣಿಗೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುವುದರಿಂದ ಜಿಲ್ಲಾ ಬಿಜೆಪಿಯ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೇರಿಸಲು ಕರೆ ನೀಡಿದರು.
ಗದಗ ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿದರು. ಈ ಸಂದರ್ಭದಲ್ಲಿ ಗಂಗಾಧರ ಹಬೀಬ, ಶಶಿಧರ ದಿಂಡೂರ, ಸುರೇಶ ಚಿತ್ತರಗಿ, ನಿರ್ಮಲಾ ಕೊಳ್ಳಿ, ಸಂತೋಷ ಅಕ್ಕಿ, ಶಂಕರ ಕರಿಬಿಷ್ಟಿ, ಮಂಜುನಾಥ ತಳವಾರ, ವಂದನಾ ವರ್ಣೇಕರ, ಅಯ್ಯಪ್ಪ ಅಂಗಡಿ, ರತ್ನಾ ಕುರಗೊಡ, ಪದ್ಮನಿ ಮುತ್ತಲದಿನ್ನಿ, ಕಿಶನ ಮೇರವಾಡೆ, ನಿಸಾರ ನಮಾಜಿ ಮುಂತಾದವರು ಉಪಸ್ಥಿತರಿದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!