ವಿಜಯಸಾಕ್ಷಿ ಸುದ್ದಿ, ಗದಗ: ಮಹಾರಾಷ್ಟ್ರ ಮಂಡಳಿ, ಎನ್.ಎಂ.ಆರ್. ಸ್ಕ್ಯಾನ್ ಸೆಂಟರ್ ಬಿಲ್ಡಿಂಗ್, ಕೋರ್ಟ್ ಸರ್ಕಲ್, ಕ್ಲಬ್ ರೋಡ್ ಹುಬ್ಬಳ್ಳಿಯ ಸಂಗೀತ ನೃತ್ಯ ಕಲಾನಿಕೇತನ ಟ್ರಸ್ಟ್, ನಕ್ಷತ್ರ ಫೌಂಡೇಶನ್ ಹುಬ್ಬಳ್ಳಿ ವತಿಯಿಂದ ಗದುಗಿನ ಕಲಾವಿದೆ ಡಾ. ಪದ್ಮಾ ಜೆ.ಕಬಾಡಿ ಅವರ ಸಾಹಿತ್ಯ, ಸಾಂಸ್ಕೃತಿಕ ಸೇವೆಗಳನ್ನು ಪರಿಗಣಿಸಿ ಫೆ. 22ರಂದು ರಾಜ್ಯ ಮಟ್ಟದ `ಕನ್ನಡದ ಸೇವಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ನಕ್ಷತ್ರ ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಪುಷ್ಪ ಹಿರೇಮಠ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Trending Now



