ವಿಜಯಸಾಕ್ಷಿ ಸುದ್ದಿ, ಗದಗ : ವೃಕ್ಷವೇ ದೇವರು, ವೃಕ್ಷಗಳೇ ಸರ್ವಸ್ವ ಎಂದು ಪ್ರತಿಪಾದಿಸುತ್ತಾ, ಜೀವನದ ಕೊನೆಯ ದಿನವು ಪಂಚವಟಿ ಗಿಡಗಳನ್ನು ನೆಟ್ಟು ಮಹಾನ್ ಚೇತನವಾದ ಖ್ಯಾತ ಆಯುರ್ವೇದ ವೈದ್ಯರಾದ ಡಾ. ಬಸವರಾಜ ಮ.ಕೊಂಚಿಗೇರಿ ಅವರ ನೆನಪಿಗಾಗಿ ಪಂಚವಟಿ ಅಭಿಯಾನವನ್ನು ಅಜ್ಜನವರ ಸ್ಮರಣಾರ್ಥವಾಗಿ ಶಿವರತ್ನ ವೃದ್ಧಾಶ್ರಮದ ಹಿರಿಯರ ಸಮ್ಮುಖದಲ್ಲಿ ಪ್ರಾರಂಭಿಸಲಾಯಿತು.
Advertisement
ಈ ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಅಧಿಕಾರಿ ಎನ್.ರಂಜನಿ, ಕೆಎಸ್‌ಆರ್‌ಡಿಪಿಆರ್ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಲಿಂಗರಾಜ ನಿಡುವಣಿ, ವೈದ್ಯರ ಪುತ್ರ ನೀಲಪ್ಪ ಬಸವರಾಜ ಕೊಂಚಿಗೇರಿ, ಶಿವರತ್ನ ವೃದ್ಧಾಶ್ರಮದ ಮುಖ್ಯ ಅಧಿಕಾರಿ ಮಂಜುಳಾ ಲಕ್ಕುಂಡಿ, ರವಿಕುಮಾರ ಹೊಂಬಾಳಿ, ಪ್ರಧಾನಿ ಕೊಂಚಿಗೇರಿ, ಕೆಎಸ್‌ಆರ್‌ಡಿಪಿಆರ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.