ಡಾ. ಜಗಜೀವನರಾಮ್ ನಾಮಫಲಕ ಅಳವಡಿಸಲು ಮನವಿ

0
Dr. Request to install Jagjivanaram nameplate
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಟಾಂಗಾ ಕೂಟ ಹತ್ತಿರದ ಕ್ಲಾಥ್ ಮಾರ್ಕೆಟ್‌ನಲ್ಲಿ ಡಾ. ಬಾಬು ಜಗಜೀವನರಾಮ್ ನಾಮಫಲಕ ಮತ್ತು ಗೇಟ್ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವ ಹೆಚ್.ಕೆ. ಪಾಟೀಲರಿಗೆ ಸಮತಾ ಸೇನಾ ಸಂಘಟನೆಯ ಗದಗ ಜಿಲ್ಲಾಧ್ಯಕ್ಷ ಕಿರಣ ಗಾಮನಗಟ್ಟಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಕಿರಣ ಗಾಮನಗಟ್ಟಿ ಮಾತನಾಡಿ, ಈ ನಾಮಫಲಕದಲ್ಲಿ ಡಾ. ಬಿ.ಆರ್. ಅಂಬೇಡ್ಕರ, ಡಾ. ಬಾಬು ಜಗಜೀವನರಾಮ, ಶಿವಶರಣ ಸಮಗಾರ ಹರಳಯ್ಯನವರ ಭಾವಚಿತ್ರಗಳನ್ನು ಅಳವಡಿಸಬೇಕು. ಈ ಬಗ್ಗೆ ಗದಗ-ಬೆಟಗೇರಿ ನಗರಸಭೆ ಠರಾವು ಮಾಡಿಸಲು ನಿರ್ದೇಶನ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಹಿರಿಯರಾದ ವೀರೇಶ ಮುದೇನಗುಡಿ, ಶ್ರೀಧರ ಅಗಸಿಮನಿ, ಮಂಜುನಾಥ ಕೊರವರ, ರಫೀಕ ದಾರವಾಡ, ವಿನಾಯಕ ಅಗಸಿಮನಿ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here