ವಿಜಯಸಾಕ್ಷಿ ಸುದ್ದಿ, ಗದಗ : ಅವ್ವ ಸೇವಾ ಟ್ರಸ್ಟ್ನ ನಿರ್ದೇಶಕರಾದ ಹೇಮಲತಾ ಬಸವರಾಜ ಹೊರಟ್ಟಿಯವರ ಸಹಕಾರದಿಂದ ನಿರ್ಮಾಣಗೊಂಡ ಗಣಿತ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರ ಗಣಿತ ಕಲಿಕೆಗೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗುತ್ತದೆ ಎಂದು ಚಿಂತಕ, ಖ್ಯಾತ ವೈದ್ಯ ಡಾ. ಎಸ್.ಆರ್. ನಾಗನೂರ ಅಭಿಪ್ರಾಯಪಟ್ಟರು.
ಅವರು ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳಿಂದ ದತ್ತು ಪಡೆದ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ಗಣಿತ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಮೇಲೆ ಈ ಶಾಲೆ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆದಿದೆ. ಇಲ್ಲಿನ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್, ಗಣಿತ ಪ್ರಯೋಗಾಲಯ ವಿದ್ಯಾರ್ಥಿಗಳ ಕಲಿಕೆಗೆ ಉಪಯುಕ್ತವಾಗುತ್ತವೆ. ಇಷ್ಟೊಂದು ಸೌಲಭ್ಯಗಳನ್ನು ಹೊಂದಿದ ಈ ಸರಕಾರಿ ಶಾಲೆ ರಾಜ್ಯಮಟ್ಟದಲ್ಲಿ ಮಾದರಿಯಾಗುವಂತೆ ಬೆಳೆಸುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿಯವರ ಹಾಗೂ ಅವರ ಸ್ನೇಹಿತ ಡಾ.ಬಸವರಾಜ ಧಾರವಾಡ ಅವರ ಶ್ರಮ ಸಾರ್ಥಕವಾಗಿದೆ. ಇವರೊಂದಿಗೆ ಹೊರಟ್ಟಿಯವರ ಪತ್ನಿ ಹೇಮಲತಾ ಹೊರಟ್ಟಿಯವರು ಕೈ ಜೋಡಿಸಿದ್ದು ಶ್ಲಾಘನೀಯ ಎಂದರು.
ಡಾ.ಬಸವರಾಜ ಧಾರವಾಡ ಮಾತನಾಡಿ, ಬಸವರಾಜ ಹೊರಟ್ಟಿಯವರ ಸಹಕಾರದಿಂದ ಈ ಶಾಲೆಯನ್ನು ದತ್ತು ಪಡೆದು ರಾಜ್ಯದಲ್ಲಿಯೇ ಒಂದು ಮಾದರಿ ಶಾಲೆಯನ್ನಾಗಿ ಕಟ್ಟಬೇಕೆಂಬ ಸಂಕಲ್ಪ ನಮಗಿದೆ. ಅದಕ್ಕೆಲ್ಲ ಕೈಜೋಡಿಸಿ ಸಹಕರಿಸಿದ ಹೊರಟ್ಟಿಯವರ ಸಹಕಾರವನ್ನು ಗದುಗಿನ ಜನತೆ ಎಂದೂ ಮರೆಯಲಾರರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯೆ ಜಯಲಕ್ಷ್ಮಿ ಬಸವರಾಜ ಅಣ್ಣಿಗೇರಿ, ಶಶಿಕಲಾ ಗುಳೆದವರ, ಸುಮಂಗಲಾ ಪತ್ತಾರ್, ಮಂಜುಳಾ ಸಾಂಬ್ರಾಣಿ, ಎಸ್.ಬಿ. ಗದ್ದನಗೇರಿ, ಜಿ.ಎನ್. ಅಳವಂಡಿ, ಶಂಕ್ರಮ್ಮ ಹನಮಗೌಡರ, ಶಾರದಾ ಬಾಣದ, ಶೋಭಾ ಗಾಳಿ, ಎಸ್.ಯು. ಕುಷ್ಟಗಿ, ವಿ.ಬಿ. ಶಿವನಗೌಡರ, ನಾಗಪ್ಪ ಶಿರೋಳ, ರಮೇಶ ಬಸರಿ, ಪದ್ಮಾವತಿ ದಾಸರ, ಎಲ್.ಬಿ. ಮಾಳೊತ್ತರ ಸೇರಿದಂತೆ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.