ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ರೋಣ ತಾಲೂಕಿನ ಮೇಗೂರು ಗ್ರಾಮದಲ್ಲಿ ನಡೆದ ಡಾ. ಶಂಕರಗೌಡ ನಾಗನಗೌಡ ಪಾಟೀಲ ಪ್ರತಿಷ್ಠಾನದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸರ್ವಾನುಮತದಿಂದ ನೂತನ ಕಾರ್ಯಕಾರಿ ಮಂಡಳಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಶಾಸಕ ಜಿ.ಎಸ್. ಪಾಟೀಲ, ಉಪಾಧ್ಯಕ್ಷರಾಗಿ ಐ.ಎಂ. ಕುಸಬಿ, ಪ್ರಧಾನ ಕಾರ್ಯದರ್ಶಿಗಳಾಗಿ ಎ.ಓ. ಪಾಟೀಲ, ನಿರ್ದೇಶಕರಾಗಿ ಸಿ.ಪಿ. ಪಾಟೀಲ, ಎ.ಎಂ. ಪಾಟೀಲ, ಎಸ್.ಬಿ. ಪಾಟೀಲ, ಎಸ್.ಎ. ಪಾಟೀಲ, ಜಯಶ್ರೀ ಎಸ್.ನಂದಿ, ಭಾರತಿ ಎ.ಪಾಟೀಲ, ವಾಯ್.ಆರ್. ಪಾಟೀಲ, ಪ್ರವೀಣ ದಂಗವಾಲ ಇವರುಗಳು ಆಯ್ಕೆಯಾಗಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಎ.ಓ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



