ಬೆಂಗಳೂರು: ನಟ ಅನಿರುದ್ಧ್ ಜತ್ಕರ್ ಕಳೆದ ಐದು ವರ್ಷಗಳಿಂದ “ಸ್ವಚ್ಛತೆಗಾಗಿ ನಾನೂ ಸಹಭಾಗಿ” ಅಭಿಯಾನ ನಡೆಸುತ್ತಿದ್ದಾರೆ.
ನಗರದಲ್ಲಿ ಎಲ್ಲೆಡೆ ಬಿದ್ದ ಕಸದ ರಾಶಿಗಳನ್ನು ಗಮನಿಸಿ, ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡುತ್ತಾರೆ.
ಸಿನಿಮಾ ಮತ್ತು ಸೀರಿಯಲ್ ಕೆಲಸಗಳ ನಡುವೆ ತಮ್ಮ ಅಭಿಯಾನವನ್ನು ನಿರಂತರವಾಗಿ ಮುಂದುವರಿಸುತ್ತಿರುವ ಅವರು, ಬೆಂಗಳೂರಿನ ‘ಡಾ. ವಿಷ್ಣುವರ್ಧನ್ ರಸ್ತೆ’ಯಲ್ಲಿ ಬಿದ್ದ ಕಸದ ರಾಶಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕಸ ಹಾಕಬಾರದು ಎಂಬ ಎಚ್ಚರಿಕೆ ಇರುವ ಸ್ಥಳದಲ್ಲಿಯೇ ಜನರು ಕಸ ಸುರಿಸುತ್ತಿರುವುದನ್ನು ಅನಿರುದ್ಧ್ ಟೀಕಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ನಂತರ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ.



