ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಸಿದ್ಧಲಿಂಗೇಶ್ವರ ನಾಟ್ಯ ಸಂಘ ಮಂಡಲಗೇರಿ ವತಿಯಿಂದ ಸೆ. 26ರಿಂದ ಗದಗ ನಗರದ ಭೂಮರೆಡ್ಡಿ ಅವರ ಜಾಗದಲ್ಲಿ ನಾಟಕ ಪ್ರದರ್ಶನ ಆರಂಭವಾಗಲಿದೆ ಎಂದು ಸಂಘದ ಸಂಚಾಲಕ ಕುಮಾರ ಅರಳಿಹಳ್ಳಿ ತಿಳಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕಾಶ ಕಡಪಟ್ಟಿ ಅವರು ಬರೆದ `ಕಟಗೊಂಡ್ಯಾಕ, ಶಟಗೊಂಡ್ಯಾಕ’ ಎನ್ನುವ ಹಾಸ್ಯ ನಾಟಕದ ಮೂಲಕ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ಪುಟ್ಟರಾಜ ಕಲಾಪೋಷಕರ ಸಂಘದ ಅಧ್ಯಕ್ಷ ಎಫ್.ಪಿ. ಮರಿಗೌಡ ಮಾತನಾಡಿ, ವೃತ್ತಿ ರಂಗಭೂಮಿ ಸಂಕಷ್ಟದಲ್ಲಿದೆ. ಕಲಾವಿದರು ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ಇಂಥ ನಾಟಕ ಕಂಪನಿಗಳಿಗೆ ನೆರವು ನೀಡಬೇಕು. ಕಲಾವಿದರಿಗೆ ಮಾಸಾಶನ ನೀಡಬೇಕು. ಜೊತೆಗೆ ಸಾರ್ವಜನಿಕರು ನಾಟಕ ನೋಡುವ ಮೂಲಕ ವೃತ್ತಿ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಸ್ತಾಕ್ ಢಾಲಾಯತ, ಸಿದ್ದಲಿಂಗಪ್ಪ ಅರಳಿ, ಈರಣ್ಣ ಕರಿಬಿಷ್ಟಿ, ಸಂಗಮೇಶ ಬೀಳಗಿ, ಬಸವರಾಜ ಕರಮುಡಿ, ಅಭಿಷೇಕ ಮುಂಡರಗಿ, ಮುತ್ತುರಾಜ ಮಂಗಳೂರು, ಮಾರುತಿ ಗದಗ, ಎಚ್.ಕೆ. ಮುಲ್ಲಾ ಇತರರು ಉಪಸ್ಥಿತರಿದ್ದರು.



