HomeBengaluru NewsBangalore: ಹೊಸ ವರ್ಷಾಚರಣೆ ವೇಳೆ ಡ್ರಿಂಕ್ ಆ್ಯಂಡ್ ಡ್ರೈವ್: 513 ಪ್ರಕರಣ ದಾಖಲು

Bangalore: ಹೊಸ ವರ್ಷಾಚರಣೆ ವೇಳೆ ಡ್ರಿಂಕ್ ಆ್ಯಂಡ್ ಡ್ರೈವ್: 513 ಪ್ರಕರಣ ದಾಖಲು

For Dai;y Updates Join Our whatsapp Group

Spread the love

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ 2024ಕ್ಕೆ ಬೈ ಬೈ ಹೇಳಿದ್ದು, ಹೊಸ ವರ್ಷ 2025ಕ್ಕೆ ಹಾಯ್ ಹಾಯ್ ಎಂದು ಹೇಳುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಕೇಕ್ ಕತ್ತರಿಸಿ, ಪರಸ್ಪರ ಶುಭಾಶಯ ಕೋರಿದ ಯುವ ಸಮೂಹ ಕುಣಿದು ಕುಪ್ಪಳಿಸಿದ್ದಾರೆ.

ಅದರ ಜೊತೆಗೆ ಹೊಸ ವರ್ಷದ ಪಾರ್ಟಿ ಮೂಡ್​ನಲ್ಲಿ ಕುಡಿದು ವಾಹನ ಚಾಲನ ಮಾಡುತ್ತಿದ್ದವರ ರಾತ್ರಿ ಪೊಲೀಸರು ಶಾಕ್​ ನೀಡಿದ್ದು. ಒಂದೆ ರಾತ್ರಿಯಲ್ಲಿ ಸುಮಾರು 513 ಕೋಟಿ ಡ್ರಿಂಕ್ ಆ್ಯಂಡ್ ಡ್ರೈವ್​ ಪ್ರಕರಣಗಳು ದಾಖಲಾಗಿವೆ.

ತಡರಾತ್ರಿ ನಗರದಾದ್ಯಂತ 28,127ಕ್ಕೂ ಹೆಚ್ಚು ವಾಹನಗಳ ತಪಾಸಣೆ ಕೈಗೊಂಡ ಸಂಚಾರ ಪೊಲೀಸರು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಒಟ್ಟು 513 ಪ್ರಕರಣಗಳನ್ನ ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ 7,620 ವಾಹನಗಳ ಚಾಲಕರನ್ನ ತಪಾಸಣೆಗೊಳಪಡಿಸಿದ್ದ ಪೊಲೀಸರು ಪಾನಮತ್ತನಾಗಿದ್ದ 330 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!