HomeKarnataka NewsMysore Dasara 2024: ಗಜಪಯಣಕ್ಕೆ ಚಾಲನೆ: ಅರಮನೆಯತ್ತ ದಸರಾ ಗಜಪಡೆಯ ಮೊದಲ ತಂಡ

Mysore Dasara 2024: ಗಜಪಯಣಕ್ಕೆ ಚಾಲನೆ: ಅರಮನೆಯತ್ತ ದಸರಾ ಗಜಪಡೆಯ ಮೊದಲ ತಂಡ

For Dai;y Updates Join Our whatsapp Group

Spread the love

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2024ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಯ ಮೊದಲ ಹಂತದಲ್ಲಿ 9 ಆನೆಗಳು ಇಂದು ಮತ್ತು ಎರಡನೇ ಹಂತದಲ್ಲಿ 5 ಆನೆಗಳು 10 ದಿನಗಳ ನಂತರ ಅರಮನೆಗೆ ಆಗಮಿಸಲಿವೆ. ಈ ಬಾರಿ ಒಟ್ಟು 14 ಆನೆಗಳು ನಾಡಹಬ್ಬದಲ್ಲಿ ಭಾಗವಹಿಸಲಿವೆ.

ಐದನೇ ಬಾರಿಗೆ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯುಗೆ ನೀಡಲಾಗಿದೆ. ಮೈಸೂರು ದಸರಾಕ್ಕೆ ಆಗಮಿಸುವ ಅಭಿಮನ್ಯು ನೇತೃತ್ವದ ಗಜ ಪಡೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಭರ್ಜರಿ ಸ್ವಾಗತವನ್ನು ನೀಡಲಾಯಿತು.

ಮೈಸೂರು- ಕೊಡಗು ಜಿಲ್ಲೆ ಗಡಿ ವೀರನಹೊಸಹಳ್ಳಿ ಬಳಿ ಆನೆಗಳನ್ನು ಅರಣ್ಯ ಇಲಾಖೆ ಹಾಗೂ ದಸರಾ ಸಮಿತಿಯಿಂದ ಬರ ಮಾಡಿಕೊಳ್ಳಲಾಯಿತು. ದಸರಾದಲ್ಲಿ ಭಾಗಿಯಾಗುವ ಆನೆಗಳಿಗೆ ವಿಶೇಷ ಪೂಜೆಯನ್ನು ಸಚಿವರಾದ ಡಾ.ಮಹದೇವಪ್ಪ, ಈಶ್ವರ್‌ ಖಂಡ್ರೆ ಮತ್ತಿತರರು ಸಲ್ಲಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!