ಚಾಲಕ- ಪ್ರಯಾಣಿಕರಿಗೆ ಚಾಕು ತೋರಿಸಿ ಕಿರಿಕ್; ಪುಂಡರಿಗೆ ತಕ್ಕ ಶಾಸ್ತಿ ಮಾಡಿದ ಸಾರ್ವಜನಿಕರು – ಗದುಗಿನ ವಿಡಿಯೋ ವೈರಲ್!

0
Spread the love

ಗದಗ:- ಜಿಲ್ಲೆಯ ಮುಳಗುಂದ ರಸ್ತೆಯ ರಾಧಾಕೃಷ್ಣ ನಗರ ಬಳಿ ಆಟೋ ಚಾಲಕ ಮತ್ತು ಅದರಲ್ಲಿದ್ದ ಪ್ರಯಾಣಿಕರನ್ನು ಬೈಕ್ ಸವಾರರು ಕಿರಿಕ್ ಮಾಡಿ, ಚಾಕು ತೋರಿಸಿ ಬೆದರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಆದರೆ ಆ ವೇಳೆ ಅಲ್ಲಿ ಇದ್ದ ಜನರು ಮುಂದೆ ಬಂದು ಪುಂಡರನ್ನು ಹಿಡಿದು ಪಾಠ ಕಲಿಸಿದ್ದಾರೆ. ಈ ಘಟನೆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಶೇರ್ ಆಗಿದೆ. ಎಸ್, ಎರಡು ಬೈಕ್‌ಗಳಲ್ಲಿ ಬಂದ ನಾಲ್ಕೈದು ಯುವಕರು ಆಟೋ ಮುಂದೆ ಅಡ್ಡಾದಿಡ್ಡಿ ಸವಾರಿ ಮಾಡುತ್ತಿದ್ದರು. ಚಾಲಕ ಕಾರಣ ಕೇಳಿದಾಗ, ಆ ಯುವಕರು ಅವನಿಗೆ ಬೆದರಿಕೆ ಹಾಕಿದರು ಎನ್ನಲಾಗಿದೆ.

https://www.facebook.com/share/v/14QaDxLz8zk/

ಆಟೋದಲ್ಲಿದ್ದ ಪ್ರಯಾಣಿಕನೊಬ್ಬ ಅವರಿಗೆ ಬುದ್ದಿ ಮಾತು ಹೇಳಿದಾಗ, ಅವರಿಗೂ ಕೂಡ ಪುಂಡರು ಚಾಕು ತೋರಿಸಿ ಹೆದರಿಸಲು ಪ್ರಯತ್ನಿಸಿದರು. ಇದನ್ನೆಲ್ಲಾ ನೋಡಿದ ಸಾರ್ವಜನಿಕರು ತಕ್ಷಣ ಮುಂದೆ ಬಂದು ಆ ಯುವಕರನ್ನು ತಡೆದರು. ಅಷ್ಟೆ ಅಲ್ಲ ಅವರಲ್ಲಿ ಒಬ್ಬ ಬೈಕ್ ಸವಾರನಿಗೆ ಜನರು ಒಂದೆರಡು ಬಾರಿಸಿ ಪಾಠ ಕಲಿಸಿದರು.

ಘಟನೆಯಿಂದ ಕೆಲಕಾಲ ಗೊಂದಲ ಉಂಟಾದರೂ, ಪೊಲೀಸರು ಬೇಗ ಸ್ಥಳಕ್ಕೆ ಬಂದು ಪರಿಸ್ಥಿತಿ ಶಾಂತಗೊಳಿಸಿದರು. ನಂತರ ಪುಂಡರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಅವರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


Spread the love

LEAVE A REPLY

Please enter your comment!
Please enter your name here