Belagavi: ರಜೆ ಕೊಡದಿದ್ದಕ್ಕೆ ಬಸ್ಸಿನಲ್ಲಿಯೇ ಚಾಲಕ ನೇಣಿಗೆ ಶರಣು..!

0
Spread the love

ಬೆಳಗಾವಿ: ಬಸ್‌ ಚಾಲಕರೊಬ್ಬರು ಬಸ್ಸಿನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಡಿಪೋದ 2ನೇ ಘಟಕದಲ್ಲಿ ನಡೆದಿದೆ. ಬಾಲಚಂದ್ರ ಹುಕೋಜಿ ನೇಣಿಗೆ ಶರಣಾದ ಚಾಲಕನಾಗಿದ್ದು, ಮನೆಯಲ್ಲಿ ಅಕ್ಕನ ಮಗಳ ಮದುವೆಯಿದ್ದ ಕಾರಣ ಕಳೆದ ಮೂರು ದಿನಗಳ ಹಿಂದೆ ರಜೆಗಾಗಿ ಅರ್ಜಿ ಸಲ್ಲಿಸಿದ್ದರು.

Advertisement

ರಜೆ ನೀಡದ ಹಿನ್ನೆಲೆ ಸಿಬಿಟಿಯಿಂದ ವಡಗಾವ ನಗರ ಸಂಚಾರ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದ ಅವರು ಅದೇ ಬಸ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಾಂಧಿ ನಗರದಲ್ಲಿವಾಸವಿದ್ದ ಮೃತ ಚಾಲಕ, ಬೆಳಿಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here