ತಪ್ಪಿದ ಚಾಲಕನ ನಿಯಂತ್ರಣ: ಕೆರೆಗೆ ಪಲ್ಟಿ ಹೊಡೆದ ಕಾರು, ಸ್ಥಳೀಯರ ಸಹಾಯದಿಂದ ಮೂವರು ಪಾರು!

0
Spread the love

ಶಿವಮೊಗ್ಗ:– ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಪಲ್ಟಿ ಹೊಡೆದಿರುವ ಘಟನೆ ರಿಪ್ಪನ್‍ಪೇಟೆಯ ತಾವರೆಕೆರೆಯಲ್ಲಿ ಜರುಗಿದೆ.

Advertisement

ಘಟನೆ ಬೆನ್ನಲ್ಲೇ ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನದಿಂದ ಕೊಲ್ಲೂರಿಗೆ ಮಾರುತಿ ಆಲ್ಟೋ ಕಾರಿನಲ್ಲಿ ಮೂವರು ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ತಾವರೆಕೆರೆಗೆ ಕಾರು ಉರುಳಿದೆ. ಕಾರು ಕೆರೆಗೆ ಉರುಳುತ್ತಿದ್ದಂತೆ ತಕ್ಷಣ ಸ್ಥಳಿಯರು ಕಾರನ್ನು ಬದಿಗೆ ತಂದು, ಮೂರನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.

ರಿಪ್ಪನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here