ಚಿತ್ರದುರ್ಗ:-ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಸೀಬಾರದ ಬಳಿ ಜರುಗಿದೆ. ಇನ್ನೂ ಘಟನೆಯಲ್ಲಿ ಆರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ,
ಅರ್ಜುನ, ಶ್ರೀಧರ್ ಮತ್ತು ಶರವಣ ಮೃತರು. ಗಾಯಗೊಂಡವರನ್ನು ಸಲ್ಮಾನ್, ನವೀನ್, ಗೋಕುಲ್ ಸೆಂಥಿಲ್ ಕುಮಾರ್, ರಮೇಶ್ ಮತ್ತು ಗೌತಮ್ ಎಂದು ಗುರುತಿಸಲಾಗಿದೆ. ಘಟನೆಗೆ ಚಾಲಕನ ಅತೀ ವೇಗ ಕಾರಣ ಎನ್ನಲಾಗಿದೆ. ಘಟನೆ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



