ಬೆಂಗಳೂರು:- ಆಟೋಗಳ ಮೇಲೆ ಪೋಸ್ಟರ್ ಅಂಟಿಸಿದವರಿಗೆ ಆರ್‌ಟಿಓ ಫೈನ್ ಅಸ್ತ್ರ ಪ್ರಯೋಗ ಮಾಡಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 5,000 ರೂ. ದಂಡ ಪ್ರಯೋಗ ಮಾಡಿರುವುದು ಆಟೋ ಚಾಲಕರ ಪಾಲಿಗೆ ಬಿಗ್ ಶಾಕ್ ಆಗಿದೆ.
ನಗರದಲ್ಲಿ ಅನೇಕ ಆಟೋಗಳ ಹಿಂದೆ ಕಲರ್ ಕಲರ್ ಜಾಹೀರಾತು ಹಾಕಿ ಓಡಾಡುತ್ತಿದ್ದ ಆಟೋ ಚಾಲಕರಿಗೆ ಆರ್‌ಟಿಓ ಬಿಸಿ ಮುಟ್ಟಿಸಿದೆ. 500 ಹಾಗೂ ಸಾವಿರದಾಸೆಗೆ ಪೋಸ್ಟರ್ ಅಂಟಿಸಿ ಅಧಿಕಾರಿಗಳಿಗೆ ತಗ್ಲಾಕೊಂಡು ಸಾವಿರಾರು ರೂ. ಫೈನ್ ಕಟ್ಟುವಂತಾಗಿದೆ.
ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಆಟೋಗಳಲ್ಲಿ ಜಾಹೀರಾತು ಪ್ರದರ್ಶನ ಮಾಡುವುದಕ್ಕೆ ವಾರ್ಷಿಕವಾಗಿ ಅನುಮತಿ ಪಡೆದಿರಬೇಕು. ಏನೇ ಜಾಹೀರಾತು ಅಳವಡಿಕೆ ಮಾಡಿದರೂ ವರ್ಷಕ್ಕೆ 5,000 ರೂ. ಕಟ್ಟಬೇಕು. ಹಾಗೊಮ್ಮೆ ಅನುಮತಿ ಪಡೆದಿದ್ದರೆ,
ವರ್ಷವಿಡೀ ಜಾಹೀರಾತು ಅಳವಡಿಕೆಗೆ ಅವಕಾಶ ಇದೆ. ಆದರೆ ಈ ನಿಯಮದ ಬಗ್ಗೆ ನಗರದ ಬಹುತೇಕ ಆಟೋ ಚಾಲಕರಿಗೆ ಅರಿವೇ ಇಲ್ಲ. ಅನುಮತಿ ಪಡೆಯದೇ ಹಾಗೂ ಹಣದ ಆಸೆಗೆ ಆಟೋ ಹಿಂದೆ ಜಾಹೀರಾತು ಪೋಸ್ಟರ್ ಹಾಕಿಸಿ ಆರ್‌ಟಿಓ ಫೈನ್ ಸುಳಿಯಲ್ಲಿ ಚಾಲಕರು ಸಿಲುಕಿಕೊಂಡಿದ್ದಾರೆ.


